ರಾಜಶೇಖರ್, ಶಿವಾನಿ
ರಾಜಶೇಖರ್, ಶಿವಾನಿ

ಟಾಲಿವುಡ್ ನಟ ರಾಜಶೇಖರ್ ಪುತ್ರಿ ವಿರುದ್ಧ ಪ್ರಕರಣ ದಾಖಲು

ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಆರೋಪದಡಿ ಟಾಲಿವುಡ್ ನಟ ರಾಜಶೇಖರ್ ಪುತ್ರಿ ಶಿವಾನಿ ವಿರುದ್ಧ ಹೈದರಾಬಾದ್ ನಲ್ಲಿ ಪ್ರಕರಣ...
ಹೈದರಾಬಾದ್: ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಆರೋಪದಡಿ ಟಾಲಿವುಡ್ ನಟ ರಾಜಶೇಖರ್ ಪುತ್ರಿ ಶಿವಾನಿ ವಿರುದ್ಧ ಹೈದರಾಬಾದ್ ನಲ್ಲಿ ಪ್ರಕರಣ ದಾಖಲಾಗಿದೆ. 
ಹೈದರಾಬಾದ್ ನ ಜ್ಯೂಬ್ಲಿ ಹಿಲ್ಸ್ ನಿಂದ ನವ ನಿರ್ಮಾಣ ನಗರದದ ಕಡೆಗೆ ಶಿವಾನಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಸ್ಪೀಡ್ ಬ್ರೇಕರ್ಸ್ ಪಾರಾಗುವಾಗ ಶಿವಾನಿಗೆ ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆ ಬದಿ ನಿಂತಿದ್ದ ಹೊಸ ಕಾರೊಂದಕ್ಕೆ ಶಿವಾನಿ ಗುದ್ದಿದ್ದಾರೆ. 
ಶಿವಾನಿ ಕಾರು ಡಿಕ್ಕಿ ಹೊಡೆದಿದ್ದರಿಂದ ಕಾರು ಮಾಲೀಕ ಜ್ಯೂಬ್ಲಿಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನನ್ವಯ ರಾಜಶೇಖರ್ ಪುತ್ರಿ ಶಿವಾನಿ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com