ಕಾಲೇಜ್ ಕುಮಾರ್: ವಿದ್ಯಾರ್ಥಿಯಾಗಿ ಮತ್ತೆ ಕಾಲೇಜಿಗೆ ತೆರಳಿದ ರವಿಶಂಕರ್!

ಎಂ ಆರ್ ಪ್ರೊಡಕ್ಷನ್ ನ ಎರಡನೇ ಸಿನಿಮಾವಾದ ಕಾಲೇಜ್ ಕುಮಾರ್ ನಲ್ಲಿ ವಿಕ್ಕಿ ವರುಣ್ ಮತ್ತು ಸಂಯುಕ್ತಾ ಹೆಗಡೆ ನಟಿಸಿದ್ದಾರೆ. ಶೃತಿ ಮತ್ತು ರವಿಶಂಕರ್ ನಾಯಕನ ಪೋಷಕರ ...
ರವಿಶಂಕರ್
ರವಿಶಂಕರ್
Updated on
ಬೆಂಗಳೂರು: ಅಲೆಮಾರಿ ಸಂತು ಎಂದೇ ಪ್ರಸಿದ್ಧವಾಗಿರುವ ನಿರ್ದೇಶಕ ಹರಿ ಸಂತೋಷ್ ಕಾಲೇಜ್ ಕುಮಾರ್ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. 
ಎಂ ಆರ್ ಪ್ರೊಡಕ್ಷನ್ ನ ಎರಡನೇ ಸಿನಿಮಾವಾದ ಕಾಲೇಜ್ ಕುಮಾರ್ ನಲ್ಲಿ ವಿಕ್ಕಿ ವರುಣ್ ಮತ್ತು ಸಂಯುಕ್ತಾ ಹೆಗಡೆ ನಟಿಸಿದ್ದಾರೆ. ಶೃತಿ ಮತ್ತು ರವಿಶಂಕರ್  ನಾಯಕನ ಪೋಷಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸಾಮಾನ್ಯ ಕಾಲೇಜು ಕಥೆಯಾಗಿರದೇ ಕೂತೂಹಲ ಮೂಡಿಸುವ ಸಿನಿಮಾವಾಗಿದೆ ಎಂಬುದು ಟ್ರೇಲರ್ ಮೂಲಕ ತಿಳಿಯುತ್ತದೆ.
ಕೆಲವು ಪಾತ್ರಗಳ ಬಗ್ಗೆ ನಿರ್ದೇಶಕರು ಎಲ್ಲಿಯೂ ಮಾತನಾಡಿಲ್ಲ, ಆದರೆ ರವಿಶಂಕರ್ ಪಾತ್ರ ಮಾತ್ರ ಆಸಕ್ತಿದಾಯಕವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ರವಿಶಂಕರ್ ಈ ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ರವಿಶಂಕರ್ ಬ್ಯಾಂಕ್ ಬೆಂಚರ್ ಅಥವಾ ಫ್ರಂಟ್ ಬೆಂಚರ್ ಎನ್ನುವುದನ್ನು ಸಿನಿಮಾ ಮನೋಡಿ ತಿಳಿದುಕೊಳ್ಳಬೇಕಿದೆ, ಕಾಲಜ್ ಕುಮಾರ್ ಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಮತ್ತೆ ಕಾಲೇಜಿಗೆ ತೆರಳಿರುವ ವಿಷಯವನ್ನು ರವಿಶಂಕರ್ ಎಲ್ಲಿಯೂ ಬಹಿರಂಗ ಪಡಿಸಿಲ್ಲ, ತಮ್ಮ ಕಾಲೇಜು ದಿನಗಳಲ್ಲಿ ನಡೆದ ಘಟನೆಗಳನ್ನು ನನಿಪಿಸಿಕೊಂಡಿದ್ದಾರೆ,..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com