ಹಾರರ್ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ : ಮಾರ್ಚ್ ನಲ್ಲಿ ಶಿವಣ್ಣ ಜೊತೆ ಹೊಸ ಸಿನಿಮಾ

ನಿರ್ಮಾಪಕಿ ಹಾಗೂ ನಟಿ ರಾಧಿಕಾ ಕುಮಾರ ಸ್ವಾಮಿ ವೈವಿಧ್ಯಮಯವಾದ ವಿಷಯಗಳ ಜೊತೆ ಪ್ರಯೋಗ ಮಾಡುವಲ್ಲಿ ನಿಪುಣೆ. ಸದ್ಯ ರವಿಚಂದ್ರನ್ ನಿರ್ದೇಶನದ ...
ರಾಧಿಕಾ ಕುಮಾರ ಸ್ವಾಮಿ
ರಾಧಿಕಾ ಕುಮಾರ ಸ್ವಾಮಿ
ಬೆಂಗಳೂರು: ನಿರ್ಮಾಪಕಿ ಹಾಗೂ ನಟಿ ರಾಧಿಕಾ ಕುಮಾರ ಸ್ವಾಮಿ ವೈವಿಧ್ಯಮಯವಾದ ವಿಷಯಗಳ ಜೊತೆ ಪ್ರಯೋಗ ಮಾಡುವಲ್ಲಿ ನಿಪುಣೆ. ಸದ್ಯ ರವಿಚಂದ್ರನ್ ನಿರ್ದೇಶನದ ರಾಜೇಂದ್ರ ಪೊನ್ನಪ್ಪ ಸಿನಿಮಾದಲ್ಲಿ ನಟಿಸುತ್ತಿರುವ ರಾಧಿಕಾ ತಮ್ಮ ಮತ್ತೊಂದು ಪ್ರಾಜೆಕ್ಟ್ ಬಗ್ಗೆ ವಿವರ ನೀಡಿದ್ದಾರೆ.
ಸಾಯಿ ಪ್ರಕಾಶ್ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣ ಜೊತೆ ತಾವು ಅಭಿನಯಿಸುತ್ತಿರುವ ಸಿನಿಮಾ ಮಾರ್ಚ್ ತಿಂಗಳಲ್ಲಿ ಸೆಟ್ಟೇರಲಿದೆ, ಸೆಂಚ್ಯುರಿ ಸ್ಟಾರ್ ಶಿವಣ್ಣ ತಮ್ಮ ಡೇಟ್ಸ್ ನೀಡಿದ್ದು, ತಮಗೆ ಸಂತೋಷವಾಗಿದೆ ಎಂದು ರಾಧಿಕಾ ಹೇಳಿದ್ದಾರೆ.
ಇದರ ಜೊತೆಗೆ ರಾಧಿಕಾ ಮತ್ತೊಂದು ಹಾರರ್ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ತಮ್ಮ ಸಹೋದರ ಹಾರರ್ ಸಿನಿಮಾಗಾಗಿ ನನ್ನ ಬಳಿ ಕಥೆ ಹೇಳಿದ. ಆ ವಸ್ತುವನ್ನಿಟ್ಟುಕೊಂಡು ಸಿನಿಮಾಗಾಗಿ ಚಿತ್ರಕಥೆ ಹಾಗೂ ಸಂಭಾಷಣೆ ತಯಾರಾಗುತ್ತಿದೆ, ಎಲ್ಲವೂ ಒಂದು ಹಂತಕ್ಕೆ ಬಂದ ನಂತರ ಅಧಿಕೃತವಾಗಿ ಪ್ರಕಟಿಸುವುದಾಗಿ ರಾಧಿಕಾ ತಿಳಿಸಿದ್ದಾರೆ.
ಮೊದಲ ಬಾರಿಗೆ ಹಾರರ್ ಸಿನಿಮಾ ನಿರ್ಮಿಸಿ ನಟಿಸುತ್ತಿದ್ದು, ಪ್ರೇಕ್ಷಕರನ್ನು ಸೆಳೆಯಲು ಬೇಕಾದ ಎಲ್ಲ ತಯಾರಿ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com