ನಾಚಿಯಾರ್ ಟೀಸರ್‌ನಲ್ಲಿ ಅಸಭ್ಯ ಭಾಷೆ: ನಟಿ ಜ್ಯೋತಿಕಾ, ನಿರ್ದೇಶಕ ಬಾಲ ವಿರುದ್ಧ ಕೇಸ್ ದಾಖಲು

ನಾಚಿಯಾರ್ ಚಿತ್ರದ ಟೀಸರ್ ನಲ್ಲಿ ಅಸಭ್ಯ ಭಾಷೆ ಬಳಸಲಾಗಿದೆ ಎಂದು ಆರೋಪಿಸಿ ಮೇಟ್ಟುಪಾಳ್ಯಂ ಮೂಲದ ರಾಜನ್ ಎಂಬುವರು ನಟಿ ಜ್ಯೋತಿಕಾ ಹಾಗೂ ಚಿತ್ರದ ನಿರ್ದೇಶಕ...
ಜ್ಯೋತಿಕಾ
ಜ್ಯೋತಿಕಾ
ನಾಚಿಯಾರ್ ಚಿತ್ರದ ಟೀಸರ್ ನಲ್ಲಿ ಅಸಭ್ಯ ಭಾಷೆ ಬಳಸಲಾಗಿದೆ ಎಂದು ಆರೋಪಿಸಿ ಮೇಟ್ಟುಪಾಳ್ಯಂ ಮೂಲದ ರಾಜನ್ ಎಂಬುವರು ನಟಿ ಜ್ಯೋತಿಕಾ ಹಾಗೂ ಚಿತ್ರದ ನಿರ್ದೇಶಕ ಬಾಲ ವಿರುದ್ಧ ದೂರು ದಾಖಲಿಸಿದ್ದಾರೆ. 
ನಾಚಿಯಾರ್ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಜ್ಯೋತಿಕಾ ನಟಿಸಿದ್ದು ಬಿಡುಗಡೆಯಾಗಿರುವ ಟ್ರೈಲರ್ ನಲ್ಲಿ ಹೆಚ್ಚಾಗಿ ಬೈಗುಳಗಳೆ ಕಾಣಿಸಿರುವುದರಿಂದ ಅವರ ವಿರುದ್ಧ ರಾಜನ್ ಎಂಬುವರು ದೂರು ದಾಖಲಿಸಿದ್ದರು. ಈ ದೂರಿನನ್ವಯ ಜ್ಯೋತಿಕಾ ಹಾಗೂ ಬಾಲ ವಿರುದ್ಧ ಐಪಿಸಿ ಸೆಕ್ಷನ್ 294(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 
ಈ ಸಂಬಂಧ ನವೆಂಬರ್ 28ರಂದು ಮೆಟ್ಟುಪಾಳ್ಯಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ನವೆಂಬರ್ 15ರಂದು ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com