ಸಿನಿಮಾ ಸುದ್ದಿ

ಅನಂತು v/s ನುಸ್ರತ್ ನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ

ಸುಧೀರ್ ನಿರ್ದೇಶನದ ಅನಂತು v/s ನುಸ್ರತ್ ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ವಕೀಲರ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಸದ್ಯ ಹಲಸೂರಿನಲ್ಲಿ ಸಿನಿಮಾ ಚಿತ್ರೀಕರಣ ...

ಅನಂತು v/s ನುಸ್ರತ್ ನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ
ಅನಂತು v/s ನುಸ್ರತ್ ಸಿನಿಮಾ ಸ್ಟಿಲ್
Published On :
ಬೆಂಗಳೂರು: ಸುಧೀರ್ ನಿರ್ದೇಶನದ ಅನಂತು v/s ನುಸ್ರತ್ ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ವಕೀಲರ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಸದ್ಯ ಹಲಸೂರಿನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ನಾಯಕಿಯಾಗಿ ಲತಾ ಹೆಗಡೆ ನಟಿಸುತ್ತಿದ್ದು, ನವೆಂಬರ್ 13 ರಿಂದ ಆಕೆ ಚಿತ್ರೀಕರಣದಲ್ಲಿ ಪಾಲ್ಗೋಳ್ಳಲಿದ್ದಾರೆ.
ಸಿನಿಮಾದ ಮತ್ತೊಂದು ಆಸಕ್ತಿದಾಯಕ ವಿಷಯವೇನೆಂದರೇ, ಕಾಮಿಡಿ ಕಿಲಾಡಿಗಳು  ರಿಯಾಲಿಟಿ ಶೋ ಮೂಲಕ ಪ್ರಸಿದ್ದವಾಗಿರು ನಯನ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕಾಮಿಡಿ ಕಿಲಾಡಿಗಳಲ್ಲಿ ತಮ್ಮ ಉತ್ತಮ ಹಾಸ್ಯ ಪ್ರಜ್ಞೆ ಮೂಲಕ ಎಲ್ಲರ ಗಮನ ಸೆಳೆದಿದ್ದ ನಯನ ಕೆಜಿಎಫ್ ಸಿನಿಮಾದಲ್ಲೂ ನಟಿಸಿದ್ದಾರೆ. ಮತ್ತೊಂದು ಕಾಮಿಡಿ ಸಿನಿಮಾ ಜಂತರ್ ಮಂಥರ್ ನಲ್ಲೂ ಅಭಿನಯಿಸಿದ್ದು, ಅನಂತು...ವಿನಲ್ಲಿ  ನಾಯಕ ಅನಂತು ಸಹೋದ್ಯೋಗಿ ಶಾಂತಲಕ್ಷ್ಮಿ ಪಾತ್ರದಲ್ಲಿ ನಟಿಸಿದ್ದಾರೆ.
ಖಳನಾಯಕನಾಗಿ ಪ್ರಸಿದ್ಧಿಹೊಂದಿರುವ ರವಿಶಂಕರ್ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ,ಅನಂತು... ಸಿನಿಮಾದಲ್ಲಿ ರವಿಶಂಕರ್ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ, ಗವಿಲಿಂಗಸ್ವಾಮಿ ಕೇತಮಾರನಹಳ್ಳಿ ಎಂಬ ಪಾತ್ರದಲ್ಲಿ ಅನಂತುವಿನ ಗಿರಾಕಿಯಾಗಿ ಸಿನಿಮಾದಲ್ಲಿ ರವಿಶಂಕರ್  ನಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.