ಜಗ್ಗೇಶ್ ಹೊಸ ಅವತಾರ: ಮೊಟ್ಟಮೊದಲ ಬಾರಿಗೆ ಕ್ರೈಂ ಥ್ರಿಲ್ಲರ್ ನಲ್ಲಿ ನವರಸ ನಾಯಕ

ತಮ್ಮ ಬಹುಮುಖ ಪ್ರತಿಭೆಯಿಂದ ಹಲವು ದಶಕಗಳಿಂದ ಕನ್ನಡ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸುತ್ತಿರುವ ನವರಸ ನಾಯಕ ಜಗ್ಗೇಶ್ ತಮ್ಮ ಮುಂದಿನ ಸಿನಿಮಾದಲ್ಲಿ ...
ಜಗ್ಗೇಶ್
ಜಗ್ಗೇಶ್
Updated on: 
ಬೆಂಗಳೂರು: ತಮ್ಮ ಬಹುಮುಖ ಪ್ರತಿಭೆಯಿಂದ ಹಲವು ದಶಕಗಳಿಂದ ಕನ್ನಡ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸುತ್ತಿರುವ ನವರಸ ನಾಯಕ ಜಗ್ಗೇಶ್ ತಮ್ಮ ಮುಂದಿನ ಸಿನಿಮಾದಲ್ಲಿ ಕೊಲೆಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. 
ವೈವಿಧ್ಯಮಯ ಪಾತ್ರಗಳ ಮೂಲಕ ಹೊಸ ಹೊಸ ಪ್ರಯೋಗಗಳನ್ನು ನಡೆಸುವ ಜಗ್ಗೇಶ್  ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ  ಮೊದಲ ಬಾರಿಗೆ ಜಗ್ಗೇಶ್ ನೆಗೆಟಿವ್ ರೋಲ್ ನಲ್ಲಿ ಅಭಿನಯಿಸುತ್ತಿದ್ದಾರೆ.
ಜಾಹೀರಾತು ನಿರ್ಮಾಪಕರೊಬ್ಬರು ಸಿನಿಮಾ ನಿರ್ಮಿಸುತ್ತಿದ್ದು, ಇದುವರೆಗೂ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ, ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗುವವರೆಗೂ ಕಾಯಬೇಕಿದೆ.
ಆದರೆ ಸಿನಿಮಾದಲ್ಲಿ ಜಗ್ಗೇಶ್ ಸರಣಿ ಕೊಲೆಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಕಥೆ ಕಣ್ಣ ಮುಚ್ಚಾಲೆ ಆಟದಂತಿದ್ದು, ಗುಪ್ತಚರ ಇಲಾಖೆ ಮತ್ತು ಅಪರಾಧದ ನಡುವಿನ ಸ್ಪರ್ಧೆಯಂತಿದೆ. 
ಸ್ಯಾಂಡಲ್ ವುಡ್ ನ ಹೊಸ ಟ್ರೆಂಡ್ ನಲ್ಲಿ ಕಾಣಿಸಿಕೊಳ್ಳಲು ಬಯಸಿರುವ ಜಗ್ಗೇಶ್ ಪ್ರೆಶ್ ಸಬ್ಜೆಕ್ಟ್ ಆರಿಸಿಕೊಂಡಿದ್ದಾರೆ. ಸೆಪ್ಟಂಬರ್ 22 ರಂದು ಸಿನಿಮಾ ಮೂಹೂರ್ತ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com