ಅತ್ಯಾಚಾರ ಪ್ರಕರಣ: ಭೋಜ್ ಪುರಿ ನಟನ ಬಂಧನ

ಅತ್ಯಾಚಾರ ಪ್ರಕರಣ ಸಂಬಂಧ ಭೋಜ್ ಪುರಿಯ ನಟ ಮನೋಜ್ ಪಾಂಡೆ ಎಂಬುವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ...
ಮನೋಜ್ ಪಾಂಡೆ
ಮನೋಜ್ ಪಾಂಡೆ
Updated on
ಮುಂಬೈ: ಅತ್ಯಾಚಾರ ಪ್ರಕರಣ ಸಂಬಂಧ ಭೋಜ್ ಪುರಿಯ ನಟ ಮನೋಜ್ ಪಾಂಡೆ ಎಂಬುವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 
ಕಳೆದ ಐದು ವರ್ಷಗಳಿಂದ ನಟನ ಜತೆ ಸಂಬಂಧವಿಟ್ಟುಕೊಂಡಿರುವುದಾಗಿ ಮಹಿಳೆ ಸೆಪ್ಟೆಂಬರ್ 15ರಂದು ದೂರು ದಾಖಲಿಸಿದ್ದಾರೆ. ಮದುವೆಯಾಗುವುದಾಗಿ ಹೇಳಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ದೂರಿದ್ದಾಳೆ. 
ಭೋಜ್ ಪುರಿ ಚಿತ್ರರಂಗದಲ್ಲಿ ಹೆಸರು ಮಾಡಲು ಪ್ರಯತ್ನಿಸುತ್ತಿದ್ದೆ. ಆಗ ಮನೋಜ್ ತಾನು ಹೀರೋ ಎಂದು ಹೇಳಿಕೊಂಡು ನನ್ನನ್ನು ಸೇರಿಕೊಂಡು ಹಲವು ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಇನ್ನು ಮದುವೆಯಾಗುವಂತೆ ನಾನು ಬಲವಂತ ಮಾಡಿದಾಗ ಅಂದಿನಿಂದ ಆತ ನಾಪತ್ತೆಯಾಗಿದ್ದ ಎಂದು ಹೇಳಿದ್ದಾರೆ. 
ಮಹಿಳೆಯ ದೂರಿನನ್ವಯ ಪೊಲೀಸರು ನಟನ ಮನೆಗೆ ಹೋದಾಗ ಮನೆ ಬಾಗಲಿಗೆ ಬೀಗ ಹಾಕಲಾಗಿತ್ತು. ಹೀಗಾಗಿ ಇಂದು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇನ್ನು ನಟನ ವಿರುದ್ಧ ಐಸಿಪಿ ಸೆಕ್ಷನ್ 395/17, 376, 317, 406, 506(2)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com