ತಮ್ಮ ಚಿತ್ರದ ಕುರಿತಂತೆ ಮಾತನಾಡಿರುವ ಯಶ್, ನಾವು ಅಂದುಕೊಂಡದೆ ಕೆಜಿಎಫ್ ನಲ್ಲಿ ಮೊದಲ ಭಾಗದ ಚಿತ್ರೀಕರಣ ನಡೆಸಿದ್ದೇವು. ಕೆಜಿಎಫ್ ನಲ್ಲಿ ನಿಜಕ್ಕೂ ಸುಡು ಬಿಸಿಲು. ಅದರಲ್ಲೂ 12 ರಿಂದ 3 ಗಂಟೆಯವರೆಗೆ ಕೆಜಿಎಫ್ ಕೆಂಡದಂತಾಗಿರುತ್ತದೆ. ಇನ್ನು ಅಲ್ಲಿ ಹುಡುಕಿದರೂ ಒಂದು ಮರ ಕೂಡ ಕಾಣುವುದಿಲ್ಲ. ತೇವಾಂಶದ ಗಾಳಿಯು ಎಲ್ಲಕ್ಕಿಂತ ಕೆಟ್ಟದಾಗಿತ್ತು. ಅಂತೂ ಒಂದು ವರ್ಷಗಳ ಕಾಲ ಕೆಜಿಎಫ್ ನಲ್ಲಿ ಚಿತ್ರೀಕರಣ ಮುಗಿಸಿದ್ದೇವೆ ಎಂದರು.