ಶೃತಿ ನಾಯ್ಡು ಅವರ 'ಪ್ರೀಮಿಯರ್ ಪದ್ಮಿನಿ' ಮೇಲೆ ಜಗ್ಗೇಶ್-ಮಧುಬಾಲಾ ಸವಾರಿ

ನವರಸ ನಾಯಕ ಜಗ್ಗೇಶ್‌ ಈಗ ಪ್ರೀಮಿಯರ್‌ ಪದ್ಮಿನಿ ಕಾರು ಏರಿದ್ದಾರೆ. ಈ ಪಯಣದಲ್ಲಿ ತಮ್ಮೊಂದಿಗೆ ರೋಜಾ ಖ್ಯಾತಿಯ ಮಧುಬಾಲಾ ನಟಿಸಿದ್ದಾರೆ. ...
ಪ್ರೀಮಿಯರ್ ಪದ್ಮಿನಿಯಲ್ಲಿ ಜಗ್ಗೇಶ್ ಮತ್ತು ಪ್ರಮೋದ್
ಪ್ರೀಮಿಯರ್ ಪದ್ಮಿನಿಯಲ್ಲಿ ಜಗ್ಗೇಶ್ ಮತ್ತು ಪ್ರಮೋದ್
ಬೆಂಗಳೂರು: ನವರಸ ನಾಯಕ ಜಗ್ಗೇಶ್‌ ಈಗ ಪ್ರೀಮಿಯರ್‌ ಪದ್ಮಿನಿ ಕಾರು ಏರಿದ್ದಾರೆ. ಈ ಪಯಣದಲ್ಲಿ ತಮ್ಮೊಂದಿಗೆ ರೋಜಾ ಖ್ಯಾತಿಯ ಮಧುಬಾಲಾ ನಟಿಸಿದ್ದಾರೆ. 
ಇತ್ತೀಚಿನ ದಿನಗಳಲ್ಲಿ ಹೊಸ ರೀತಿಯ ಪಾತ್ರಗಳ ಮೂಲಕ ಸದ್ದು ಮಾಡುತ್ತಿರುವ ಜಗ್ಗೇಶ್‌, ಈಗ ಪ್ರೀಮಿಯರ್‌ ಪದ್ಮಿನಿ ಎಂಬ ವಿಶಿಷ್ಟ ಟೈಟಲ್‌ವುಳ್ಳ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಇದುವರೆಗೂ ನಟಿಸದೇ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈಗಾಗಲೇ ಕಿರುತೆರೆಯಲ್ಲಿ ಹೆಸರು ಮಾಡಿರುವ ರಮೇಶ್‌ ಇಂದಿರಾ ನಿರ್ದೇಶನ ಮಾಡುತ್ತಿದ್ದಾರೆ. ಕಿರುತೆರೆಯಲ್ಲಿ ಪ್ರಸಿದ್ದವಾಗಿರುವ ನಟಿ ಕಂ ನಿರ್ದೇಶಕಿ ಶ್ರುತಿ ನಾಯ್ಡು ನಿರ್ಮಾಣದಲ್ಲಿ ಚಿತ್ರ ಮೂಡಿ ಬರಲಿದೆ.
ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚಿಗೆ ಕಾರುಗಳು ವಿಶೇಷ ಸ್ಥಾನ ಪಡೆದುಕೊಳ್ಳುತ್ತಿವೆ. ಹಾಗಾಗಿ ನಿರ್ದೇಶಕ ರಮೇಶ್‌ ಇಂದಿರಾ ಕೂಡ ತಮ್ಮ ಕಥೆಯಲ್ಲಿ ಪದ್ಮಿನಿ ಪ್ರೀಮಿಯರ್‌ ಕಾರಿಗೆ ವಿಭಿನ್ನ ಪಾತ್ರ ನೀಡಿದ್ದಾರೆ. 
ಸಿನಿಮಾ ಪೂರ್ತಿ ಆ ಕಾರು ಇರಲಿದೆಯಂತೆ. ಹಿರಿಯ ನಟರ ಜತೆ ಗೀತಾ ಬ್ಯಾಂಗಲ್‌ಸ್ಟೋರ್‌ ಮೂಲಕ ಗಮನ ಸೆಳೆದಿದ್ದ ಪ್ರಮೋದ್‌ ಕೂಡ ಮತ್ತೊಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಮೋದ್‌ ಜತೆ ಹಿತಾ ಚಂದ್ರಶೇಖರ್‌ ಕಾಂಬಿನೇಷನ್‌ ಇರಲಿದೆ.
ಡಿವೋರ್ಸ್ ಸಂಬಂಧಿತ ಕಥೆ ಇದಾಗಿದ್ದು. ಮೇ 10 ರಂದು ಸಿನಮಾ ಸೆಟ್ಟೇರಲಿದೆ, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಿನಿಮಾದ ಫೋಟೋ ಶೂಟ್‌ ನಡೆದಿದ್ದು, ಫೋಟೋದಿಂದಾಗಿಯೇ ಚಿತ್ರ ಕುತೂಹಲ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com