ಟಾಲಿಪುಡ್ ಕಾಸ್ಟಿಂಗ್ ಕೌಚ್: ನಟಿ ಶ್ರೀರೆಡ್ಡಿಗೆ ಅವಕಾಶ ಕೊಡಲು ಸಿದ್ಧ ಎಂದ ರಾಮ್ ಗೋಪಾಲ್ ವರ್ಮ

ಕಾಸ್ಟಿಂಗ್ ಕೌಚ್ ವಿರುದ್ಧ ನಟಿ ಶ್ರೀರೆಡ್ಡಿಗೆ ಬೆಂಬಲ ನೀಡಿದ್ದ ಹಿನ್ನೆಲೆಯಲ್ಲಿ ತೀವ್ರ ಟೀಕೆ ಮತ್ತು ವಿರೋಧಕ್ಕೆ ...
ರಾಮ್ ಗೋಪಾಲ್ ವರ್ಮಾ
ರಾಮ್ ಗೋಪಾಲ್ ವರ್ಮಾ
Updated on

ಮುಂಬೈ: ಕಾಸ್ಟಿಂಗ್ ಕೌಚ್ ವಿರುದ್ಧ ನಟಿ ಶ್ರೀರೆಡ್ಡಿಗೆ ಬೆಂಬಲ ನೀಡಿದ್ದ ಹಿನ್ನೆಲೆಯಲ್ಲಿ ತೀವ್ರ ಟೀಕೆ ಮತ್ತು ವಿರೋಧಕ್ಕೆ ಗುರಿಯಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇದೀಗ ಸೂಕ್ತ ಪಾತ್ರ ಸಿಕ್ಕಿದರೆ ಶ್ರೀರೆಡ್ಡಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವುದಾಗಿ ಹೇಳಿದ್ದಾರೆ.

ಅವರಿಗೆ ಸೂಕ್ತ ಪಾತ್ರ ಸಿಕ್ಕಿದರೆ ಶ್ರೀರೆಡ್ಡಿ ಜೊತೆ ಕೆಲಸ ಮಾಡಲು ಸಿದ್ದನಿದ್ದೇನೆ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

ಅವರ ಆಫೀಸರ್ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆಯಾಗುತ್ತಿದ್ದು ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೆಯಿಂದ ವಿವಾದವುಂಟಾಗಿರುವುದರಿಂದ ಅದಕ್ಕೆ ವಿಘ್ನವುಂಟಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಆದರೆ ಈ ವದಂತಿಯನ್ನು ನಿರಾಕರಿಸಿರುವ ವರ್ಮಾ, ಅವೆಲ್ಲಾ ಸಾಮಾಜಿಕ ಮಾಧ್ಯಮದಲ್ಲಿನ ವದಂತಿಯಷ್ಟೆ. ತೆಲುಗು ಚಿತ್ರೋದ್ಯಮದಲ್ಲಾಗಲಿ ಅಥವಾ ಬೇರೆ ಕಡೆಯಿಂದಾಗಲಿ ಯಾರೊಬ್ಬರು ಸಹ ನನ್ನ ಚಿತ್ರವನ್ನು ನಿಷೇಧಿಸಬೇಕೆಂದು ಹೇಳಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಶ್ರೀರೆಡ್ಡಿ ತಂದಿರುವ ಸಮಸ್ಯೆಯನ್ನು ಬಗೆಹರಿಸಲು ಮುಂದೆ ಬಂದಿದ್ದು ಸಮಿತಿಗಳನ್ನು ರಚಿಸುತ್ತಿದ್ದಾರೆ ಎಂದರು.

15 ದಿನಗಳ ಹಿಂದೆ ಶ್ರೀರೆಡ್ಡಿ ಚಿತ್ರಕ್ಕೆ ನಿಷೇಧ ತಂದರು ಆದರೆ ಎರಡು ದಿನಗಳು ಕಳೆದ ನಂತರ ನಿಷೇಧವನ್ನು ರದ್ದುಗೊಳಿಸಿ ಆಕೆಯ ಬಳಿ ಕ್ಷಮೆ ಕೇಳಿದರು ಎಂದು ವರ್ಮಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com