ಕನ್ನಡ ನಿರ್ದೇಶಕನ ಕಿರುಚಿತ್ರಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ ಕಂಠದಾನ!

ನೇತ್ರದಾನದ ಬಗ್ಗೆ ಅರಿವು ಮೂಡಿಸುವ ವೈಟ್ ಎಂಬ ಕಿರುಚಿತ್ರವನ್ನು ಮನು ನಾಗ್ ನಿರ್ದೇಶಿಸುತ್ತಿದ್ದು, ಪ್ರಿಯಾಮಣಿ ನಟಿಸುತ್ತಿದ್ದಾರೆ. 5 ಭಾಷೆಗಳಲ್ಲಿ ಈ ಕಿರುಚಿತ್ರ ...
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್
ಬೆಂಗಳೂರು: ನೇತ್ರದಾನದ ಬಗ್ಗೆ ಅರಿವು ಮೂಡಿಸುವ ವೈಟ್ ಎಂಬ ಕಿರುಚಿತ್ರವನ್ನು ಮನು ನಾಗ್ ನಿರ್ದೇಶಿಸುತ್ತಿದ್ದು, ಪ್ರಿಯಾಮಣಿ ನಟಿಸುತ್ತಿದ್ದಾರೆ. 5 ಭಾಷೆಗಳಲ್ಲಿ ಈ ಕಿರುಚಿತ್ರ ರಿಲೀಸ್ ಆಗಲಿದ್ದು, ಹಿಂದಿಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಕಂಠದಾನ ಮಾಡಿದ್ದಾರೆ.
ಕಳೆದ ವಾರ ನಿರ್ದೇಶಕ ಮನು ನಾಗ್ ಅಮಿತಾಬ್ ಬಚ್ಚನ್ ಜೊತೆ ಅವರ ಜೊತೆಗಿದ್ದು, ತಮ್ಮ ಖುಷಿಯನ್ನು ಹೇಳಿಕೊಳ್ಳಲು ಆಗುತ್ತಿಲ್ಲ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.
ಕನ್ನಡ ಭಾಷೆಗೆ ನಟ ಪುನೀತ್ ರಾಜ್ ಕುಮಾರ್ ಕಂಠದಾನ ಮಾಡುತ್ತಿದ್ದಾರೆ, ಮಲಯಾಳಂ ನಲ್ಲಿ ನಟಿ ಪ್ರಿಯಾಮಣಿ ತಮ್ಮ ಧ್ವನಿ ನೀಡಿದ್ದಾರೆ. ತಮಿಳಿನಲ್ಲಿ ಸೂರ್ಯ ಅವರಿಗೆ ಮನವಿ ಮಾಡಿದ್ದು, ಇನ್ನೂ ಅವರು ನಿರ್ಧಾರ ತಿಳಿಸಿಲ್ಲ, ತೆಲುಗಿಗೆ  ಅನುಷ್ಕಾ ಶೆಟ್ಟಿ ಅವರನ್ನು ತರಲಾಗುವುದು ಎಂದು ನಾಗ್ ಹೇಳಿದ್ದಾರೆ.
ಇನ್ನೂ ವಿವಿಧ ಮಲ್ಟಿ ಪ್ಲೆಕ್ಸ್ ಗಳನ್ನು ಸಂಪರ್ಕಿಸಿದ್ದು, ಕಮರ್ಷಿಯಲ್ ಸಿನಿಮಾ ಪ್ರದರ್ಸನ ವೇಳೆ ವೈಟ್ ಕಿರುಚಿತ್ರ ಪ್ರದರ್ಶಿಸುವಂತೆ ಕೇಳಲಾಗುವುದು,
ಇದೊಂದು ಸಾಮಾಜಿಕ ಸಮಸ್ಯೆ ಕುರಿತ ಸಿನಿಮಾವಾಗಿದ್ದು, ಬಿಗ್ ಬಿ ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಸ್ಟಾರ್ ಗಳು ಬೋರ್ಡ್ ಗೆ ಬರಲಿದ್ದಾರೆ. 
ಪ್ರಿಯಾಮಣಿ ಅಭಿನಯಿಸುತ್ತಿರುವ ಕಿರುಚಿತ್ರದ ಹೆಸರು ವೈಟ್‌.  ಮನು ನಾಗ್‌ ಯೋಗರಾಜ್ ಭಟ್‌ ಅವರ ಕೈಯಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದರು. ಎಸ್‌ ರಾಜಶೇಖರ್ ವೈಟ್‌ ಕಿರುಚಿತ್ರದ ನಿರ್ಮಾಪಕರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com