ಬಿಗ್‍ಬಾಸ್‍ ಶೋನಲ್ಲಿ ತನ್ನ ಪತ್ನಿಗೆ ಕಿಸ್ ನೀಡಿದ್ದಕ್ಕೆ ಆಕ್ರೋಶಗೊಂಡ ಪತಿ!

ಬಿಗ್ ಬಾಸ್ ಶೋಗಳು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತದೆ. ಅಂತೆ ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿಯಿಂದ ವಿವಾಹಿತ ಮಹಿಳೆಗೆ ಮುತ್ತು ನೀಡಿದ್ದು ಇದನ್ನು ಕಂಡ ಪತಿ ಗರಂ ಆಗಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬಿಗ್ ಬಾಸ್ ಶೋಗಳು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತದೆ. ಅಂತೆ ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿಯಿಂದ ವಿವಾಹಿತ ಮಹಿಳೆಗೆ ಮುತ್ತು ನೀಡಿದ್ದು ಇದನ್ನು ಕಂಡ ಪತಿ ಗರಂ ಆಗಿದ್ದಾರೆ. 
ನಟ ನಾಣಿ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ತೆಲುಗಿನ ಬಿಗ್ ಬಾಸ್ ಶೋನಲ್ಲಿ ಬಿಗ್ ಬಾಸ್ ನೀಡಿದ ಸೀಕ್ರೆಟ್ ಕಿಸ್ ಟಾಸ್ಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 
ಬಿಗ್ ಬಾಸ್ ಸ್ಪರ್ಧಿಯಾಗಿರುವ ಗಾಯಕಿ, ಕಂಠದಾನ ಕಲಾವಿದೆ ಗೀತಾ ಮಾಧುರಿ ಅವರಿಗೆ ಕಿಸ್ ಮಾಡುವಂತೆ ಸ್ಪರ್ಧಿ ರೋಲ್ ರಿಡಾಗೆ ಬಿಗ್ ಬಾಸ್ ನಿಂದ ಸೀಕ್ರೆಟ್ ಟಾಸ್ಕ್ ನೀಡಲಾಗಿತ್ತು. ಬಿಗ್ ಬಾಸ್ ಆದೇಶದಂತೆ ರೋಲ್ ಗೀತಾ ಅವರ ಹಣೆಗೆ ಮುತ್ತು ನೀಡಿದ್ದರು. ಇದೇ ವೇಳೆ ಪಕ್ಕದಲ್ಲಿದ್ದ ಸಾಮ್ರಾಟ್ ಕೂಡ ಗೀತಾ ಅವರ ಕೆನ್ನೆಗೆ ಕಿಸ್ ಮಾಡಿದ್ದಾರೆ ಇದು ಇದೀಗ ವಿವಾದಕ್ಕೆ ಕಾರಣವಾಗಿದೆ. 
ಟಾಸ್ಕ್ ನಲ್ಲಿ ಇಲ್ಲದಿದ್ದರು ಸಾಮ್ರಾಟ್ ಗೀತಾ ಅವರಿಗೆ ಕಿಸ್ ಮಾಡಿದ್ದು ಒಂದೆಡೆಯಾದರೆ, ವಿವಾಹಿತ ಮಹಿಳೆಗೆ ಹೀಗೆ ಮತ್ತು ನೀಡಿರುವುದು ಇದೀಗ ಸದ್ಯದ ಹಾಟ್ ಟಾಪಿಕ್ ಆಗಿದೆ. ಇನ್ನು ಈ ಎಪಿಸೋಡ್ ನೋಡಿದ ಗೀತಾ ಅವರ ಪತಿ ಕೂಡ ಅಸಮಾಧಾನಗೊಂಡಿದ್ದಾರೆ. ಬಿಗ್ ಬಾಸ್ ಶೋ ವಿರುದ್ಧ ಅವರು ಗರಂ ಆಗಿದ್ದಾರೆ. 
ವಿವಾದ ಸೃಷ್ಟಿಸಿರುವ ಬಿಗ್ ಬಾಸ್ ಶೋ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಆರ್ಪಿಗೋಸ್ಕರ ಈ ರೀತಿಯ ಟಾಸ್ಕ್ ನೀಡುವುದು ಸರಿಯಲ್ಲ. ಈ ಶೋ ಸಂಸ್ಕೃತಿಯನ್ನು ಹಾಳು ಮಾಡುತ್ತಿದೆ ಎಂದು ನೆಟಿಗರು ಟೀಕಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com