ಆರೆಂಜ್ ಚಿತ್ರ ಹಣ್ಣು ತಿಂದಷ್ಟೇ ಆನಂದ ನೀಡುತ್ತದೆ: ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಗೆ ಡಿಸೆಂಬರ್ ಅದೃಷ್ಟದ ತಿಂಗಳಾಗಿದ್ದು ಆ ತಿಂಗಳಲ್ಲಿ ಬಿಡುಗಡೆಯಾದ ಹಲವು ಚಿತ್ರಗಳು ಸೂಪರ್ ಹಿಟ್ ಆಗಿದ್ದು ಇದೀಗ ಇದೇ ಡಿಸೆಂಬರ್ ತಿಂಗಳಲ್ಲಿ ಆರೆಂಜ್ ಚಿತ್ರ ಸಹ...
ಪ್ರಿಯಾ ಆನಂದ್-ಗಣೇಶ್
ಪ್ರಿಯಾ ಆನಂದ್-ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ಗೆ ಡಿಸೆಂಬರ್ ಅದೃಷ್ಟದ ತಿಂಗಳಾಗಿದ್ದು ಆ ತಿಂಗಳಲ್ಲಿ ಬಿಡುಗಡೆಯಾದ ಹಲವು ಚಿತ್ರಗಳು ಸೂಪರ್ ಹಿಟ್ ಆಗಿದ್ದು ಇದೀಗ ಇದೇ ಡಿಸೆಂಬರ್ ತಿಂಗಳಲ್ಲಿ ಆರೆಂಜ್ ಚಿತ್ರ ಸಹ ಬಿಡುಗಡೆಯಾಗುತ್ತಿದೆ. 
ಕಳೆದ ವರ್ಷ ಡಿಸೆಂಬರ್ ನಲ್ಲಿ ಚಮಕ್ ಚಿತ್ರ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಇದೀಗ ನನ್ನ ಆರೆಂಜ್ ಚಿತ್ರ ಸಹ ಡಿಸೆಂಬರ್ ತಿಂಗಳಲ್ಲೇ ಬಿಡುಗಡೆಯಾಗುತ್ತಿದೆ. ಆರೆಂಜ್ ಚಿತ್ರ ಎರಡು ತಿಂಗಳ ಹಿಂದೆ ಬಿಡುಗಡೆಯಾಗಬೇಕಿತ್ತು. ಕೆಲ ಅಡೆತಡೆಗಳಿಂದ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು ಎಂದು ಗಣೇಶ್ ಹೇಳಿದ್ದಾರೆ. 
ಆರೆಂಜ್ ಚಿತ್ರ ಔಟ್ ಅಂಡ್ ಔಟ್ ಕಾಮಿಡಿ ಚಿತ್ರವಾಗಿದೆ. ಆರೆಂಜ್ ಚಿತ್ರ ಹಣ್ಣು ತಿಂದಷ್ಟೇ ಆನಂದವನ್ನು ನೀಡುತ್ತದೆ. ಚಿತ್ರದಲ್ಲಿ ಕಾಮಿಡಿ, ರೊಮ್ಯಾನ್ಸ್, ಭಾವನಾತ್ಮಕ ಮತ್ತು ಕುತೂಹಲ ಹುಟ್ಟಿಸುತ್ತದೆ ಎಂದು ಗಣೇಶ್ ಹೇಳಿದ್ದಾರೆ. 
ಆರೆಂಜ್ ಚಿತ್ರವನ್ನು ಪ್ರಶಾಂತ್ ರಾಜ್ ನಿರ್ದೇಶನ ಮಾಡಿದ್ದಾರೆ. ಗಣೇಶ್ ಗೆ ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com