ಜೀರೋ ಮತ್ತು ಕೆಜಿಎಫ್ ಚಿತ್ರದ ಪೋಸ್ಟರ್
ಸಿನಿಮಾ ಸುದ್ದಿ
ಕೆಜಿಎಫ್ ಚಿತ್ರದ ಟ್ರೈಲರ್ ನೋಡಿದ ಶಾರುಖ್ ಖಾನ್ ಹೇಳಿದ್ದೇನು?
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಕೆಜಿಎಫ್' ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಚಿತ್ರದ ಕುರಿತ ಕುತೂಹಲಕಾರಿ ವಿಚಾರಗಳು ಬಯಲಾಗುತ್ತಿದ್ದು, ಕೆಜಿಎಫ್ ಚಿತ್ರದ ಟ್ರೈಲರ್ ಅನ್ನು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ವೀಕ್ಷಣೆ ಮಾಡಿದ್ದರಂತೆ.
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಕೆಜಿಎಫ್' ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಚಿತ್ರದ ಕುರಿತ ಕುತೂಹಲಕಾರಿ ವಿಚಾರಗಳು ಬಯಲಾಗುತ್ತಿದ್ದು, ಕೆಜಿಎಫ್ ಚಿತ್ರದ ಟ್ರೈಲರ್ ಅನ್ನು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ವೀಕ್ಷಣೆ ಮಾಡಿದ್ದರಂತೆ.
ಇದೇ ಡಿಸೆಂಬರ್ 21ರಂದು ಕೆಜಿಎಫ್ ಚಿತ್ರದೊಂದಿಗೆ ಬಾಲಿವುಡ್ ಬಾದ್ ಶಾ ಶಾರುಖ್ ಅಭಿನಯದ ಜೀರೋ ಚಿತ್ರ ಕೂಡ ಬಿಡುಗಡೆಯಾಗುತ್ತಿದ್ದು, ಜೀರೋ ಚಿತ್ರಕ್ಕೆ ಟಕ್ಕರ್ ನೀಡುತ್ತಿದೆ ಎಂದು ಅಭಿಮಾನಿಗಳು ಈ ಹಿಂದೆ ಕೆಡರಾರಿದ್ದರು. ಆದರೆ ಇದೀಗ ಸ್ವತಃ ಶಾರುಖ್ ಖಾನ್ ಅವರೇ ಕೆಜಿಎಫ್ ಚಿತ್ರದ ಟ್ರೈಲರ್ ವೀಕ್ಷಣೆ ಮಾಡಿದ್ದು, ಕೇವಲ ವೀಕ್ಷಣೆ ಮಾಡಿದ್ದಷ್ಟೇ ಅಲ್ಲದೆ ನಟ ಯಶ್ ಅವರಿಗೆ ಅಭಿನಂದನೆ ಕೂಡ ಸಲ್ಲಿಸಿದರಂತೆ.
ಹೌದು ಈ ವಿಚಾರವನ್ನು ಸ್ವತಃ ಕೆಜಿಎಫ್ ಚಿತ್ರದ ನಾಯಕ ನಟ ಯಶ್ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದು, ಕೆಜಿಎಫ್ ಚಿತ್ರದ ಟ್ರೈಲರ್ ಅನ್ನು ನಟ ಶಾರುಖ್ ಖಾನ್ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಟ್ರೇಲರ್ ಬಗ್ಗೆ ಮೆಚ್ಚುಗೆ ಕೂಡ ಸೂಚಿಸಿದ್ದಾರೆ. ಅಲ್ಲದೆ ಬೆಂಗಳೂರಿಗೆ ಬಂದಾಗ ನನ್ನನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ ಎಂದು ಹೇಳಿದರು. ಅಲ್ಲದೆ ಸಮಯ ಸಿಕ್ಕಿದಾಗ ನಾನೇ ಖುದ್ದಾಗಿ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ