ದಾಖಲೆ ಬರೆದ ಕೆಜಿಎಫ್; ಐಎಂಡಿಬಿ ಮೋಸ್ಟ್ ರೇಟಿಂಗ್, ಟ್ರೆಂಡಿಂಗ್ ಚಿತ್ರ ಪಟ್ಟಿಯಲ್ಲಿ ಅಗ್ರ ಸ್ಥಾನ

ಕನ್ನಡ ಸಿನಿಮಾ ಲೋಕದಲ್ಲೇ ಹೊಸ ಇತಿಹಾಸ ಸೃಷ್ಟಿಸಿರುವ 'ಕೆಜಿಎಫ್'ಚಿತ್ರ ಮತ್ತೊಂದು ದಾಖಲೆ ಬರೆದಿದ್ದು, ಖ್ಯಾತ ಸಿನಿಮಾ ಡೇಟಾಬೇಸ್ ತಾಣ ಇಂಟರ್ ನೆಟ್ ಮೂವಿ ಡೇಡಾ ಬೇಸ್(ಐಎಂಡಿಬಿ) ರೇಟಿಂಗ್ಸ್ ಮತ್ತು ಟ್ರೆಂಡಿಂಗ್ ಚಿತ್ರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕನ್ನಡ ಸಿನಿಮಾ ಲೋಕದಲ್ಲೇ ಹೊಸ ಇತಿಹಾಸ ಸೃಷ್ಟಿಸಿರುವ 'ಕೆಜಿಎಫ್'ಚಿತ್ರ ಮತ್ತೊಂದು ದಾಖಲೆ ಬರೆದಿದ್ದು, ಖ್ಯಾತ ಸಿನಿಮಾ ಡೇಟಾಬೇಸ್ ತಾಣ ಇಂಟರ್ ನೆಟ್ ಮೂವಿ ಡೇಡಾ ಬೇಸ್(ಐಎಂಡಿಬಿ) ರೇಟಿಂಗ್ಸ್ ಮತ್ತು ಟ್ರೆಂಡಿಂಗ್ ಚಿತ್ರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. 
ಹೌದು.. ಐಎಂಡಿಬಿ ರಾಕಿಂಗ್ ಸ್ಟಾರ್ ಯಶ್ ಅಭಿಯನಯದ 'ಕೆಜಿಎಫ್' ಸಿನಿಮಾ ಸೂಪರ್ ಡೂಪರ್ ಎಂದು ವಿಶ್ಲೇಷಿಸಿದ್ದು, ಒಟ್ಟು 10 ರೇಟಿಂಗ್ ಅಂಕಗಳ ಪೈಕಿ ಕೆಜಿಎಫ್ ಗೆ 9.4 ರೇಟಿಂಗ್ ನೀಡಿದೆ. ಅಲ್ಲದೆ ನಟ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಜೀರೋವನ್ನು ಕೆಜಿಎಫ್ ಹಿಂದಿಕ್ಕಿದೆ. ಇಲ್ಲಿ ಜೀರೋ ಚಿತ್ರಕ್ಕೆ 7.8 ರೇಟಿಂಗ್ ಗಳನ್ನು ನೀಡಲಾಗಿದೆ. ಆ ಮೂಲಕ ಕನ್ನಡ ಸಿನಿಮಾ ಆನ್ ಲೈನ್ ರೇಟಿಂಗ್ಸ್ ಕೊಡುವ ವೆಬ್‍ಸೈಟ್‍ ನಲ್ಲಿ ಕೆಜಿಎಫ್ ಅಬ್ಬರಿಸುತ್ತಿದೆ.
ಇಂದು ಬಿಡುಗಡೆಯಾಗಿರುವ ಕೆಜಿಎಫ್ ಚಿತ್ರ ಕರ್ನಾಟಕದ 400 ಸ್ಕ್ರೀನ್‍ಗಳು ಸೇರಿದಂತೆ ವಿಶ್ವದ 2 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. 
ಐಎಂಡಿಬಿ ಟ್ರೆಂಡಿಂಗ್ ಚಿತ್ರಗಳ ಪಟ್ಟಿಯಲ್ಲೂ ಕೆಜಿಎಫ್ ಹವಾ
ಇನ್ನು ಇದೇ ಐಎಂಡಿಬಿಯ ಟ್ರೆಂಡಿಂಗ್ ಚಿತ್ರಗಳ ಪಟ್ಟಿಯಲ್ಲೂ ಕೆಜಿಎಫ್ ಅಗ್ರ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಶಾರುಖ್ ಖಾನ್ ರ ಜೀರೋ ಚಿತ್ರವಿದೆ. ರಜನಿಕಾಂತ್ ಅಭಿನಯದ 2.0 5ನೇ ಸ್ಥಾನಕ್ಕೆ ಕುಸಿದಿದ್ದು, ನಾಳೆ ಬಿಡುಗಡೆಯಾಗಲಿರುವ ಧನುಷ್ ಅಭಿನಯದ ಮಾರಿ-2 6ನೇ ಸ್ಥಾನಕ್ಕೇರಿದೆ.
ಉಗ್ರಂ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಡೈರೆಕ್ಟ್ ಮಾಡಿರುವ 70 ಕೋಟಿ ರೂಪಾಯಿ ವೆಚ್ಚದ ಕೆಜಿಎಫ್ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಐದು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ವಿಜಯ್ ಕಿರಂಗದೂರು ನಿರ್ಮಾಣದ ಸಿನಿಮಾದಲ್ಲಿ ಮಾಸ್ಟರ್ ಪೀಸ್ ಗೆ ಶ್ರೀನಿಧಿ ಶೆಟ್ಟಿ ಜೋಡಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com