ಮುಂದಿನ ಕನ್ನಡ ಚಿತ್ರಕ್ಕೆ ಸೋನಾಲ್ ಮಾಂಟೇರಿಯಾ ಸಹಿ

ರಾಮ ಮತ್ತು ಲಕ್ಷ್ಮಣ್ ಸಹೋದರರು ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ತಲ್ವರ್ ಪೇಟೆ ಚಿತ್ರದಲ್ಲಿನ ನಾಯಕಿ ಪಾತ್ರಕ್ಕೆ ಸೋನಾಲ್ ಮಾಂಟೇರಿಯಾ ಸಹಿ ಹಾಕಿದ್ದಾರೆ.
ಸೋನಾಲ್ ಮಾಂಟೇರಿಯಾ
ಸೋನಾಲ್ ಮಾಂಟೇರಿಯಾ
Updated on: 

ರಾಮ ಮತ್ತು ಲಕ್ಷ್ಮಣ್  ಸಹೋದರರು ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ತಲ್ವರ್ ಪೇಟೆ ಚಿತ್ರದಲ್ಲಿನ ನಾಯಕಿ ಪಾತ್ರಕ್ಕೆ ಸೋನಾಲ್ ಮಾಂಟೇರಿಯಾ ಸಹಿ ಹಾಕಿದ್ದಾರೆ.ರಾಮ ಮತ್ತು ಲಕ್ಷ್ಮಣ್  ನಿರ್ದೇಶಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ಈ ಹಿಂದೆ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಅವರು ಕೆಲಸ ಮಾಡಿದ್ದಾರೆ.

ತುಳು  ಭಾಷೆಯ ಎಕ್ಕ ಸಕ್ಕ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಸೋನಾಲ್  ಈವರೆಗೂ ಆರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಮಧ್ಯೆ  ಸಾಜನ್ ಚಲೇ ಸಸೂರಾಲ್’ ಚಿತ್ರದ ಮುಂದುವರಿದ ಭಾಗದ ಚಿತ್ರದಲ್ಲೂ ಸೋನಾಲಿ ನಟಿಸುತ್ತಿದ್ದಾರಂತೆ.

ತಲ್ವಾರ್ ಪೇಟೆ ಚಿತ್ರವನ್ನು ಶೈಲೇಷ್ ಪ್ರೋಢಕ್ಷನ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.  ಜನವರಿಯಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

ಈ ಮಧ್ಯೆ ನಾಯಕನ ಪಾತ್ರಕ್ಕಾಗಿ   ವಶಿಷ್ಠ ಸಿಂಹ ಅವರನ್ನು  ನಿರ್ಮಾಪಕರು ಕೇಳಿದ್ದಾರೆ. ಆದರೆ. ಇನ್ನೂ ಅವರು ಸಹಿ ಮಾಡಿಲ್ಲ. ಸದ್ಯ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ವಶಿಷ್ಠ ಸಿಂಹ ಹಾಗೂ  ಮಾನ್ವಿತ್ ಕಾಮತ್ ನಾಯಕ, ನಟಿಯಾಗಿ ಅಭಿನಯಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com