ಹಾಲಿ ಸುದ್ದಿಮೂಲಗಳ ಅನ್ವಯ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ನೂತನ ದಾಖಲೆಯೊಂದಕ್ಕೆ ಪೈಲ್ವಾನ್ ಸಜ್ಜಾಗಿದ್ದು, ಪೈಲ್ವಾನ್ ಚಿತ್ರದ ಟಿವಿ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ. ಹೌದು.. ಪೈಲ್ವಾನ್ ಚಿತ್ರವನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಲು ದೇಶದ ದೊಡ್ಡ ದೊಡ್ಡ ಸಂಸ್ಥೆಗಳು ಆಫರ್ ನೀಡಲು ಮುಂದಾಗಿದ್ದು, ಎಲ್ಲಾ ಎಂಟು ಭಾಷೆಯಲ್ಲಿ ಚಿತ್ರವನ್ನು ಟಿವಿಯಲ್ಲಿ ಪ್ರಸಾರ ಮಾಡಲು ಪ್ರತಿಷ್ಠಿತ ಕಂಪನಿಯೊಂದು ಬರೋಬ್ಬರಿ 30 ಕೋಟಿ ಆಫರ್ ನೀಡಿದೆಯಂತೆ. ಈ ಬಗ್ಗೆ ಸ್ವತಃ ಚಿತ್ರ ನಿರ್ದೇಶಕ ಕೃಷ್ಣ ಅವರು ಮಾಹಿತಿ ನೀಡಿದ್ದು, ಒಂದು ವೇಳೆ ಈ ಒಪ್ಪಂದ ಸಾಧ್ಯವಾಗಿದ್ದೇ ಆದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ಬೃಹತ್ ಮೊತ್ತಕ್ಕೆ ಟಿವಿ ಹಕ್ಕು ಮಾರಾಟವಾದ ಮೊದಲ ಚಿತ್ರ ಎಂಬ ಖ್ಯಾತಿಗೆ ಪೈಲ್ವಾನ್ ಪಾತ್ರವಾಗಲಿದೆ.