ಕೆಜಿಎಫ್ ಚಾಪ್ಟರ್ 2 ರಿಲೀಸ್ ಯಾವಾಗ? ಈ ಬಗ್ಗೆ ನಟ ಯಶ್ ಹೇಳಿದ್ದೇನು?

ಕಜಿಎಫ್ ಚಿತ್ರ ಬಿಡುಗಡೆಯಾಗಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ಕೆಜಿಎಫ್ ಪಾರ್ಟ್ 2 ನತ್ತ ನೆಟ್ಟಿದ್ದು, ಪಾರ್ಟ್ 2 ರಿಲೀಸ್ ಡೇಟ್ ಯಾವಾಗ ಎಂಬ ಪ್ರಶ್ನೆಗೆ ನಟ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.
ಫೇಸ್ ಬುಕ್ ಲೈವ್ ನಲ್ಲಿ ಯಶ್
ಫೇಸ್ ಬುಕ್ ಲೈವ್ ನಲ್ಲಿ ಯಶ್
ಬೆಂಗಳೂರು: ಕಜಿಎಫ್ ಚಿತ್ರ ಬಿಡುಗಡೆಯಾಗಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ಕೆಜಿಎಫ್ ಪಾರ್ಟ್ 2 ನತ್ತ ನೆಟ್ಟಿದ್ದು, ಪಾರ್ಟ್ 2 ರಿಲೀಸ್ ಡೇಟ್ ಯಾವಾಗ ಎಂಬ ಪ್ರಶ್ನೆಗೆ ನಟ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರ ಯಶಸ್ಸು ಸಾಧಿಸಿದ ಬಳಿಕ ಇದೇ ಮೊದಲ ಬಾರಿಗೆ ಪೇಸ್ ಬುಕ್ ಲೈವ್ ಮೂಲಕ ಅಭಿಮಾನಿಗಳೊಂದಿಗೆ ಮಾತನಾಡಿದ ಯಶ್, ಕೆಜಿಎಫ್ ಚಿತ್ರದ ಈ ಯಶಸ್ಸಿಗೆ ಅಭಿಮಾನಿಗಳ ಪ್ರೋತ್ಸಾಹವೇ ಕಾರಣ, ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಹೇಳಿದರು. 
ಅಂತೆಯೇ ಕೆಜಿಎಫ್ ಚಾಪ್ಟರ್​-2 ರಿಲೀಸ್ ಡೇಟ್ ಕೇಳಿದ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಯಶ್, ಸದ್ಯ ಚಾಪ್ಟರ್​-1 ಬಂದಿದೆ ಜನ ಎಂಜಾಯ್ ಮಾಡಿ, ಚಾಪ್ಟರ್​-2ಗಿನ್ನೂ ತುಂಬಾನೇ ಟೈಮ್​ ಇದೆ. ಈಗಿನ್ನೂ ಚಾಪ್ಟರ್​​ 1 ಬಂದಿದೆ. ಈ ಸಿನಿಮಾ ನೋಡಿ. ಪಾರ್ಟ್​-2 ಆದಷ್ಟು ಬೇಗ ಶುರು ಮಾಡ್ತೀವಿ. ಅದಕ್ಕೆ ಅದರದ್ದೇ ಆದ ಜವಾಬ್ದಾರಿಗಳಿವೆ. ಎಲ್ಲವೂ ಪಕ್ಕಾ ಆಗಿದೆ ಅಂತ ಗೊತ್ತಾದ ಮೇಲೆ ಆ ಪಾರ್ಟ್​-2 ಶೂಟಿಂಗ್​ ಶುರು ಮಾಡುತ್ತೇವೆ ಎಂದು ಹೇಳಿದರು.
ಅಂತೆಯೇ  ಕೆಜಿಎಫ್​ ಸಿನಿಮಾವನ್ನ ತೆಲುಗಿನಲ್ಲಿ ನೋಡಿ ಖುಷಿ ಪಟ್ಟ ಅಭಿಮಾನಿಗಳಿಗೆ ಥ್ಯಾಂಕ್ಸ್​ ಹೇಳಿದ ಯಶ್, ತಮ್ಮ ಪ್ರಯತ್ನಕ್ಕೆ ಬೆಂಬಲಿಸಿದಕ್ಕೆ ಕೃತಜ್ಞತೆ ಸಲ್ಲಿಸಿದರು. ಜೊತೆಗೆ ಅಭಿಮಾನಿಗಳ ಜೊತೆಗೆ ಚಿತ್ರ ಹಂಚಿಕೆ ಮಾಡಿದ ‘ವಾರಾಹಿ ಫಿಲಂಸ್​ಗೆ ಸಾಯಿ ಕೊರಾಪಾಟಿ ಅವರಿಗೆ ಧನ್ಯವಾದಗಳನ್ನ ಹೇಳೋಕೆ ಇಷ್ಟ ಪಡ್ತೀನಿ.ಕನ್ನಡಿಗರು ಸಾಕಷ್ಟು ತೆಲುಗು ಸಿನಿಮಾಗಳಿಗೆ ಸಪೋರ್ಟ್​ ಮಾಡಿದ್ದಾರೆ. ನಾವೂ ಕೂಡ ತೆಲುಗು ಸಿನಿಮಾಗಳನ್ನ ಪ್ರೀತಿ ಮಾಡ್ತೀವಿ, ನೀವೀಗ ಕನ್ನಡದ ಕೆಜಿಎಫ್ ನ ಮೆಚ್ಚಿದ್ದೀರಿ. ನಿಮ್ಮ ಸಪೋರ್ಟ್​​ ಕಂಡು ನಮಗೂ ಖುಷಿ ಇದೆ ಎಂದು ಯಶ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com