ಚಾಲೆಂಜಿಂಗ್ ಸ್ಟಾರ್ ದರ್ಶನ್ 53ನೇ ಚಿತ್ರದ ಟೈಟಲ್ 'ರಾಬರ್ಟ್'!

ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 53ನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದ್ದು ಚಿತ್ರದ ಫಸ್ಟ್ ಲುಕ್ ಸಾಕಷ್ಟು ಕುತೂಹಲ ಕೆರಳಿಸಿದೆ...
ದರ್ಶನ್
ದರ್ಶನ್
ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 53ನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದ್ದು ಚಿತ್ರದ ಫಸ್ಟ್ ಲುಕ್ ಸಾಕಷ್ಟು ಕುತೂಹಲ ಕೆರಳಿಸಿದೆ. 
ನಿರ್ದೇಶಕ ತರುಣ್ ಸುಧೀರ್ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಚಿತ್ರದ ಟೈಟಲ್ ಅಧಿಕೃತವಾಗಿ ಘೋಷಣೆಯಾಗಿದೆ.
ಟೈಟಲ್ ಪೋಸ್ಟರ್ನಲ್ಲಿ ಹನುಮಂತನ ಹೆಗಲ ಮೇಲೆ ರಾಮ ಕೂತು, ಬಾಣ ಬಿಡುತ್ತಿರುವ ಫೋಟೋ ಈಗ ಚರ್ಚೆಗೆ ಕಾರಣವಾಗಿದೆ. 
ತರುಣ್ ಸುಧೀರ್ ಚೊಚ್ಚಲ ನಿರ್ದೇಶನದ ಚೌಕ ಚಿತ್ರದಲ್ಲಿ ದರ್ಶನ್ ರಾಬರ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ದರ್ಶನ್ ಅವರ 53ನೇ ಚಿತ್ರಕ್ಕೂ ಇದೇ ಟೈಟಲ್ ಇಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com