ಕನಸು ನನಸು; ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಕೆಜಿಎಫ್!

ಕೆಜಿಎಫ್ ಚಿತ್ರ ಅಮೆರಿಕದಲ್ಲಿ ಮೊಟ್ಟ ಮೊದಲ ಬಾರಿಗೆ 4,00,000 ಡಾಲರ್ ಗಳಿಸಿ ಮೊಟ್ಟ ಮೊದಲ ಕನ್ನಡ ಚಿತ್ರ ಎಂಬ ಸಾರ್ವಕಾಲಿಕ ದಾಖಲೆಗೆ ಕೆಜಿಎಫ್ ಪಾತ್ರವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸಿರುವ ಕೆಜಿಎಫ್ ಚಿತ್ರದ ಗಲ್ಲಾ ಪೆಟ್ಟಿಗೆ ಗಳಿಕೆ ನಿರೀಕ್ಷೆಯನ್ನೂ ಮೀರಿ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದ್ದು, ಅಮೆರಿಕದಲ್ಲಿ ಮೊಟ್ಟ ಮೊದಲ ಬಾರಿಗೆ  4,00,000 ಡಾಲರ್ ಗಳಿಸಿ ಮೊಟ್ಟ ಮೊದಲ ಕನ್ನಡ ಚಿತ್ರ ಎಂಬ ಸಾರ್ವಕಾಲಿಕ ದಾಖಲೆಗೆ ಕೆಜಿಎಫ್ ಪಾತ್ರವಾಗಿದೆ.
‘ಕೆಜಿಎಫ್’ ಚಿತ್ರದಿಂದಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಖದರೇ ಬದಲಾಗಿದ್ದು, ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ  ಸುದ್ದಿ ಮಾಡುತ್ತಿರುವ ಕೆಜಿಎಫ್ ಇದೀಗ ವಿದೇಶದಲ್ಲೂ ಸಾರ್ವಕಾಲಿಕ ದಾಖಲೆ ಬರೆದಿದೆ. ಹೌದು.. ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಬಿಡುಗಡೆಯಾಗಿರುವ ಕೆಜಿಎಫ್ ಚಿತ್ರಕ್ಕೆ ಅಮೆರಿಕದಲ್ಲಿ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಅಮೆರಿಕದಲ್ಲಿ 5ನೇ ದಿನಕ್ಕೆ ಕೆಜಿಎಫ್ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಬರೊಬ್ಬರಿ 4,00,000 ಡಾಲರ್ (2,79,70,000) ಮೀರಿದೆ. 
ಆ ಮೂಲಕ ಕೆಜಿಎಫ್ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದು ಅಮೆರಿಕದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಮೊಟ್ಟ ಮೊದಲ ಚಿತ್ರ ಎಂಬ ಕೀರ್ತಿಗೂ ಕೆಜಿಎಫ್ ಪಾತ್ರವಾಗಿದೆ. 
ಈ ಹಿಂದೆ ಅಮೆರಿಕದಲ್ಲಿ ಅನೂಪ್ ಭಂಡಾರಿ ಅವರ ರಂಗಿತರಂಗ ಚಿತ್ರ 3.15, 000 ಡಾಲರ್ ಗಳಿಕೆ ಮಾಡಿ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿತ್ತು. ಆದರೆ ಇದೀಗ ಈ ಚಿತ್ರದ ದಾಖಲೆಯನ್ನೂ ಕೂಡ ಕೆಜಿಎಫ್ ಮೀರಿ ನಿಂತಿದೆ. ಅಂತೆಯೇ ಈ ಗಳಿಕೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದ್ದು, ಅಮೆರಿಕದಲ್ಲಿ ಕೆಜಿಎಫ್ ಹವಾ ಇನ್ನೂ ಕಡಿಮೆಯಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com