ನುಸ್ರುತ್ ಪಾತ್ರ ನನ್ನ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾಗಿದೆ: ಲತಾ ಹೆಗ್ಡೆ

ಸಿನಿಮಾ ಇಂಡಸ್ಟ್ರಿಗೆ ಬಂದಾಗ ನಟಿ ಲತಾ ಹೆಗ್ಡೆ ಸ್ಪಾಟ್ ಲೈಟ್ ಆಗಿದ್ದರು, ನ್ಯೂಜಿಲೆಂಡ್ ನಿಂದ ಬಂದ ಕನ್ನಡತಿಯಾಗಿದ್ದಾರೆ, ಅತಿರಥ ಸಿನಿಮಾ ಮೂಲಕ ಸ್ಯಾಂಡಲ್ ..
ಅನಂತು v/s ನುಸ್ರುತ್  ಸಿನಿಮಾ ಸ್ಟಿಲ್
ಅನಂತು v/s ನುಸ್ರುತ್ ಸಿನಿಮಾ ಸ್ಟಿಲ್
ಬೆಂಗಳೂರು: ಸಿನಿಮಾ ಇಂಡಸ್ಟ್ರಿಗೆ ಬಂದಾಗ ನಟಿ ಲತಾ ಹೆಗ್ಡೆ ಸ್ಪಾಟ್ ಲೈಟ್ ಆಗಿದ್ದರು, ನ್ಯೂಜಿಲೆಂಡ್ ನಿಂದ ಬಂದ ಕನ್ನಡತಿಯಾಗಿದ್ದಾರೆ, ಅತಿರಥ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿರಿಸಿದ ಲತಾ ಹೆಗ್ಡೆ ಮತ್ತೆ ಅನಂತ್ v/s ನುಸ್ರುತ್ ಮೂಲಕ ಸುದ್ದಿಯಾಗಿದ್ದಾರೆ.
ತುಂಬಾ ಹಿಂದೆಯೇ ನಾನು ಎಂಬಿಎ ಮಾಡಿದ್ದೇನೆ, ನನ್ನ ಪಾಲಿಗೆ ಯಾವಾಗಲು ಅಧ್ಯಯನವೇ ಪ್ರಾಥಮಿಕ, ನನ್ನ ಎಂಬಿಎ ನಂತರ ಏನು ಮಾಡಬೇಕು ಎಂದು ಯೋಚಿಸಿರಲಿಲ್ಲ, ಸಿನಿಮಾ ಒಂದು ಉತ್ತಮ ಅನುಭವ, ಮನೆಯಿಂದ ದೂರ ಇರುವುದು  ತುಂಬಾ ಕಷ್ಟದ ಕೆಲಸ, ಮನೆಯವರಿಂದ ಅರ್ಧ ಪ್ರಪಂಚ ದೂರ ಇರುವುದು ಬೇಸರ ತರಿಸುತ್ತದೆ ಎಂದು ಹೇಳಿದ್ದಾರೆ.
ಸಿನಿಮಾದಲ್ಲಿ ಮುಸ್ಲಿಂ ಹುಡುಗಿ ಪಾತ್ರದಲ್ಲಿ ನಟಿಸಿದ್ದು,  ಅನಂತು v/s ನುಸ್ರುತ್ ನಲ್ಲಿ ನನ್ನ ಪಾತ್ರ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ, ಅದಕ್ಕಾಗಿಯೇ ನಾನು ಚಿತ್ರಕ್ಕೆ ಸಹಿ ಮಾಡಿದೆ.
ಚಿತ್ರದಲ್ಲಿ ನುಸ್ರುತ್ ಜಡ್ಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ,.ನಾನು ತುಂಬಾ ಮಾತನಾಡುತ್ತೇನೆ, ಆದರೆ ಕೋರ್ಟ್ ನಲ್ಲಿ ಕೋಟು ಧರಿಸಿ, ನ್ಯಾಯಾಧೀಶರ ಸೀಟಿನಲ್ಲಿ ಕುಳಿತಾಗ ಅದರ ಅನುಭವವೇ ಬೇರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com