ಹೌದು.. ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ ಕನ್ನಡ ಚಿತ್ರಗಳನ್ನು ಗಡಿ ದಾಟಿಸಿ ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಪಸರಿಸುವಂತೆ ಮಾಡಿದ ಕೆಜಿಎಫ್ ಚಿತ್ರ ತಂಡಕ್ಕೆ ಜಾರ್ಖಂಡ್ ಐಎಎಸ್ ಅಧಿಕಾರಿ ರಾಜೇಶ್ವರಿ ಅವರು ಧನ್ಯವಾದ ಹೇಳಿದ್ದಾರೆ. ಜಾರ್ಖಂಡ್ನಲ್ಲಿ ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜೇಶ್ವರಿ ಅವರು ಕರ್ನಾಟಕದ ಮೂಲದವರು ಮತ್ತು ಕನ್ನಡತಿ ಎಂಬುದು ನಮಗೆ ಹೆಮ್ಮೆಯ ವಿಚಾರವಾದರೆ, ಕನ್ನಡ ಚಿತ್ರವೊಂದು ಜಾರ್ಖಂಡ್ ನಲ್ಲಿ ಹವಾ ಸೃಷ್ಟಿಸಿದೆ ಎಂದು ರಾಜೇಶ್ವರಿ ಅವರು ಹೆಮ್ಮೆ ಪಡುತ್ತಿದ್ದಾರೆ.