ಅಭಿಮಾನಿಗಳ ಮನಸೂರೆಗೊಂಡಿರುವ ಕೆಜಿಎಫ್ ಚಿತ್ರಕ್ಕೆ ಬರೀ ಅಭಿಮಾನಿಗಳಷ್ಟೇ ಅಲ್ಲದೆ ಸಿನಿ ಸ್ಟಾರ್ ಗಳು ಕೂಡ ಮನ ಸೋತಿದ್ದು, ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಇದೀಗ ಈ ಪಟ್ಟಿಗೆ ಗಜಕೇಸರಿ ನಟಿ ಅಮೂಲ್ಯ ಕೂಡ ಸೇರ್ಪಡೆಯಾಗಿದ್ದು, ಕೆಜಿಎಫ್ ಚಿತ್ರಕ್ಕೆ ಮನಸೋತಿರುವ ನಟಿ ಬರೊಬ್ಬರಿ 25 ಟಿಕೆಟ್ ಗಳನ್ನು ಬುಕ್ ಮಾಡಿ ಈ ವಿಚಾರವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.