ಶೀಘ್ರದಲ್ಲೆ ಚೀನಾ ಥಿಯೇಟರ್ ಗಳಿಗೂ ಅಪ್ಪಳಿಸಲಿದೆ 'ಕೆಜಿಎಫ್'; ನಿರ್ಮಾಪಕ ವಿಜಯ್ ಕಿರಗಂದೂರ್

ಈ ಹಿಂದೆ ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಚೀನಾದಲ್ಲಿ ಬಿಡುಗಡೆಯಾಗಿ ಭಾರಿ ಸೌಂಡ್ ಮಾಡಿತ್ತು. ಇದೀಗ ಅದೇ ಹಾದಿಯಲ್ಲಿ ಕನ್ನಡದ ಕೆಜಿಎಫ್ ಕೂಡ ಸಾಗುವ ಕುರಿತು ಮಾಹಿತಿ ಲಭ್ಯವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಈ ಹಿಂದೆ ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಚೀನಾದಲ್ಲಿ ಬಿಡುಗಡೆಯಾಗಿ ಭಾರಿ ಸೌಂಡ್ ಮಾಡಿತ್ತು. ಇದೀಗ ಅದೇ ಹಾದಿಯಲ್ಲಿ ಕನ್ನಡದ ಕೆಜಿಎಫ್ ಕೂಡ ಸಾಗುವ ಕುರಿತು ಮಾಹಿತಿ ಲಭ್ಯವಾಗಿದೆ.
ಹೌದು.. ಕಳೆದ ವಾರ ತೆರೆಕಂಡು ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ಕನ್ನಡದ ಕೆಜಿಎಫ್ ಚಿತ್ರ ಇದೀಗ ಚೀನಾದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ನಚಿತ್ರ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಮಾಹಿತಿ ನೀಡಿದ್ದು, ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಚೀನಾದಲ್ಲಿ ಚಿತ್ರ ಬಿಡುಗಡೆ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
'ಚೀನಾದಲ್ಲಿ ಚಿತ್ರ ಬಿಡುಗಡೆ ಸಂಬಂಧ ಮಾತುಕತೆ ನಡೆಯುತ್ತಿದೆ. ಆಲೋಚನೆ ಇದೆ. ಚೀನಾದಲ್ಲಿ ಸಿನಿಮಾ ಬಿಡುಗಡೆ ಮಾಡಬೇಕಾದರೆ ಒಂದು ಸಮಸ್ಯೆ ಇದೆ. ಅಲ್ಲಿನ ಸರ್ಕಾರ ಈ ಸಿನಿಮಾ ನೋಡಿ ಅನುಮತಿ ನೀಡಬೇಕು. ಸರ್ಕಾರ ಒಪ್ಪಿದರೆ ಮಾತ್ರ ಕೆಜಿಎಫ್‌ ಚೀನಾದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಪ್ರಯತ್ನ ನಡೆದಿದೆ. ಎಲ್ಲವೂ ಅಂದುಕೊಂಡಂತೆ ಆದರೆ 'ಕೆಜಿಎಫ್‌' ಚೀನಾದಲ್ಲಿ ಬಿಡುಗಡೆಯಾಗುವುದು ನಿಶ್ಚಿತ ಎಂದು ಹೇಳಿದ್ದಾರೆ.
ಇನ್ನು ಬಿಡುಗಡೆಯಾದ  ದಿನಗಳ ಬಳಿಕವೂ ಕೆಜಿಎಫ್ ಚಿತ್ರ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಬದಲಿಗೆ ಇನ್ನೂ ಹೆಚ್ಚಿನ ಪ್ರಮಾಣದ ಸ್ಕ್ರೀನ್ ಗಳು ದೊರೆಯುತ್ತಿದ್ದು, ತಮಿಳಿನಲ್ಲಿ ಮತ್ತು ತೆಲುಗಿನಲ್ಲಿ ಸ್ಕ್ರೀನ್ ಗಳ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಅಂತೆಯೇ ಹಿಂದಿಯಲ್ಲೂ ಕೂಡ ಕೆಜಿಎಫ್ ಸ್ಕ್ರೀನ್ ಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡಿದ್ದು, ಕೆಜಿಎಫ್ ನೊಂದಿಗೆ ಬಿಡುಗಡೆಯಾದ ಜೀರೋ ಚಿತ್ರದ ಸ್ಕ್ರೀನ್ ಗಳ ಸಂಖ್ಯೆಯಲ್ಲಿ ಕುಸಿತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com