ಇದೇ ವೇಳೆ ಟಗರು ಚಿತ್ರದಲ್ಲಿ ತಮ್ಮದು ಪೊಲೀಸ್ ಆಧಿಕಾರಿಯ ಪಾತ್ರ ಎಂದು ಹೇಳಿದ ಶಿವಣ್ಣ, ಖಾಕಿ ಧರಿಸಿ ಅಭಿನಯ ಮಾಡುವುದು ಇನ್ನೂ ದೊಡ್ಡ ಸವಾಲು, ಇದೇ ಕೇವಲ ಬೆಳ್ಳಿ ತೆರೆಗೆ ಸೀಮಿತವಾಗಿದ್ದರೂ, ದೊಡ್ಡ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಎಲ್ಲಿಯವರೆಗೂ ಸಮಾಜ ಎಚ್ಚೆತ್ತುಕೊಳ್ಳುವುದಿಲ್ಲವೇ ಅಲ್ಲಿಯವರೆಗೂ ದುಷ್ಟರ ಸಮಸ್ಯೆಗಳು ಮುಂದುವರೆಯುತ್ತವೆ. ಸಮಾಜದ ಪ್ರತೀಯೊಬ್ಬ ನಾಗರೀಕನೂ ತನ್ನ ಜವಾಬ್ದಾರಿ ಅರಿತರೆ ಮಾತ್ರ ಸಮಾಜ ಬದಲಾಗುತ್ತದೆ. ತಾನು ಮಾಡುತ್ತಿರುವುದು ತಪ್ಪು ಎಂದು ಆತನಿಗೆ ಮನವರಿಕೆಯಾದಾಗ ತಪ್ಪುಗಳು ಕ್ಷೀಣಿಸುತ್ತವೆ. ಈಗೀಗ ಜನರಿಗೆ ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಕಾನೂನಿಂದ ತಪ್ಪಿಸಿಕೊಳ್ಳಬಹುದು ಎಂಬ ಭಾವನೆಯಿಂದ ಪದೇ ಪದೇ ತಪ್ಪುಗಳನ್ನು ಮಾಡುತ್ತಿದ್ದಾರೆ. ಇಂತಹವುಗಳಿಗೆ ಆಸ್ಪದ ನೀಡಬಾರದು. ಇದೇ ಸಂದೇಶವನ್ನು ಚಿತ್ರದಲ್ಲಿ ವಿಭಿನ್ನವಾಗಿ ತೋರಿಸಲಾಗಿದೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.