ನೀರವ್ ಮೋದಿಯ ಪ್ರಚಾರ ರಾಯಭಾರಿಯಿಂದ ಹಿಂದೆ ಸರಿದ ಪ್ರಿಯಾಂಕಾ ಚೋಪ್ರಾ

ಉದ್ಯಮಿ ನೀರವ್ ಮೋದಿಯವರ ಜ್ಯುವೆಲ್ಲರಿ ಉತ್ಪನ್ನಗಳ ಪ್ರಚಾರ ರಾಯಭಾರಿಯಿಂದ ....
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ

ನವದೆಹಲಿ: ಉದ್ಯಮಿ ನೀರವ್ ಮೋದಿಯವರ ಜ್ಯುವೆಲ್ಲರಿ ಉತ್ಪನ್ನಗಳ ಪ್ರಚಾರ ರಾಯಭಾರಿಯಿಂದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಿಂದೆ ಸರಿದಿದ್ದಾರೆ. ಈ ವಿಷಯವನ್ನು ಪ್ರಿಯಾಂಕಾ ಅವರ ವಕ್ತಾರರು ತಿಳಿಸಿದ್ದಾರೆ ಎಂದು  ಸುದ್ದಿಸಂಸ್ಥೆಗಳು  ವರದಿ ಮಾಡಿವೆ.

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಪೋತ್ರಾ ಜೊತೆಗೆ ನೀರವ್ ಮೋದಿಯವರ ಕಂಪೆನಿಯ ಜ್ಯುವೆಲ್ಲರಿ ಜಾಹಿರಾತುಗಳಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದರು.
ನೀರವ್ ಮೋದಿ ವಿರುದ್ಧ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಮ್ಮ ಗುತ್ತಿಗೆಯನ್ನು ಪ್ರಿಯಾಂಕಾ ಚೋಪ್ರಾ ರದ್ದುಪಡಿಸಿದ್ದಾರೆ ಎಂದು ಅವರ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದ ನಟ ಸಿದ್ದಾರ್ಥ್ ಮಲ್ಹೋತ್ರಾ, ಬ್ರಾಂಡ್ ಜೊತೆಗೆ ತಮ್ಮ ಗುತ್ತಿಗೆ ಅವಧಿ ಮುಗಿದಿರುವುದರಿಂದ ತಾವು ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 11,300 ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೀರವ್ ಮೋದಿ ತನಿಖೆ ಎದುರಿಸುತ್ತಿದ್ದಾರೆ. ಬ್ಯಾಂಕು ಅವರಿಂದ ಸಾಲವನ್ನು ಹಿಂಪಡೆಯಲು ಪ್ರಯತ್ನಿಸುತ್ತಿದೆ.

ಸರಿಯಾದ ವಿಧಾನವನ್ನು ಅನುಸರಿಸದೆ ಪಡೆದಿರುವ 11,300 ಕೋಟಿ ರೂಪಾಯಿಗಳನ್ನು ಹಿಂತಿರುಗಿಸಲು ಸೂಕ್ತ ಯೋಜನೆಯನ್ನು ಅಳವಡಿಸಿಕೊಳ್ಳುವಂತೆ ಪಂಜಾಬ್ ನ್ಯಾಷನಲ್ ಬ್ಯಾಂಕು ನೀರವ್ ಮೋದಿಗೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com