'ಧ್ವಜ'ದ ರಮ್ಯಾಗೂ ನಟಿ-ರಾಜಕಾರಣಿ ರಮ್ಯಾಗೂ ಸಂಬಂಧವಿಲ್ಲ: ಅಶೋಕ್ ಕಶ್ಯಪ್

ಹೊಸ ನಾಯಕ ನಟ ರವಿ ಮತ್ತು ಖ್ಯಾತ ಬಹುಭಾಷಾ ನಟಿ ಪ್ರಿಯಾಮಣಿ ಅಭಿನಯದ ಧ್ವಜ ಚಿತ್ರದ ಮೊದಲ ಟೀಸರ್ ...
ರಮ್ಯಾ
ರಮ್ಯಾ
Updated on: 

ಹೊಸ ನಾಯಕ ನಟ ರವಿ ಮತ್ತು ಖ್ಯಾತ ಬಹುಭಾಷಾ ನಟಿ ಪ್ರಿಯಾಮಣಿ ಅಭಿನಯದ ಧ್ವಜ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ. ತಮಿಳಿನ ಯಶಸ್ವಿ ಚಿತ್ರ ಕೋಡಿಯ ರಿಮೇಕ್ ಚಿತ್ರ ಇದಾಗಿದ್ದು ಅಲ್ಲದೆ ರಾಜಕೀಯ ವಿಡಂಬನೆಯ ಚಿತ್ರವಾಗಿರುವ ಇದು ಅಶೋಕ್ ಕಶ್ಯಪ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ.  ಈ ಚಿತ್ರದಲ್ಲಿ ಪ್ರಿಯಾಮಣಿ ಪಾತ್ರದ ಹೆಸರು ರಮ್ಯಾ ಎಂದು. ಆ ಕಾರಣಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ. ಪಾತ್ರದಲ್ಲಿನ ರಮ್ಯಾಗೂ ನಟಿ, ರಾಜಕಾರಣಿ ರಮ್ಯಾಗೂ ಹೋಲಿಕೆ ಮಾಡಲಾಗಿದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.

ಈ ಬಗ್ಗೆ ಅಶೋಕ್ ಕಶ್ಯಪ್ ಹೇಳುವುದು ಹೀಗೆ: ಚುನಾವಣೆ ಹೊಸ್ತಿಲಿನಲ್ಲಿರುವುದರಿಂದ ಈ ಸಮಯದಲ್ಲಿ ಬಿಡುಗಡೆಯಾಗುತ್ತಿರುವುದರಿಂದ ರಮ್ಯಾ ಎಂದು ಪ್ರಿಯಾಮಣಿ ಪಾತ್ರಕ್ಕೆ ಹೆಸರಿಡುವುದು ಸೂಕ್ತವೆನಿಸಿತು. ಆದರೆ ಚಿತ್ರದಲ್ಲಿರುವ ಪಾತ್ರಕ್ಕೂ ನಟಿ, ರಾಜಕಾರಣಿ ರಮ್ಯಾ ಅವರಿಗೂ ಇಲ್ಲಿ ಯಾವುದೇ ಹೋಲಿಕೆಯಿರುವುದಿಲ್ಲ. ಇದು ಕೋಡಿ ಚಿತ್ರದ ರಿಮೇಕ್ ಆಗಿರುವುದರಿಂದ ಜೀವನಾಧಾರಿತ ಚಿತ್ರವನ್ನು ಮಾಡುತ್ತಿಲ್ಲ. ಇದೊಂದು ಕಾಲ್ಪನಿಕ ರಾಜಕೀಯ ಥ್ರಿಲ್ಲರ್ ಚಿತ್ರ ಎನ್ನುತ್ತಾರೆ.

ಚಿತ್ರ ಬಿಡುಗಡೆಗೆ ಮುನ್ನ ಆಡಿಯೊ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಈ ವರ್ಷ ವಿಧಾನಸಭೆ ಚುನಾವಣೆ ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ರಾಜಕೀಯ ವಿಡಂಬನೆ ಚಿತ್ರವಾಗಿರುವುದರಿಂದ ಚುನಾವಣೆ ಸಮಯದಲ್ಲಿ ಬಿಡುಗಡೆ ಮಾಡುತ್ತಿದ್ದೇವಷ್ಟೆ.ಇಲ್ಲಿ ರಮ್ಯಾ ಅವರ ಹೆಸರಿಗೆ ಮಸಿಬಳಿಯುವ ಯಾವುದೇ ಕೆಲಸ ಮಾಡಿಲ್ಲ. ಅದು ಅವರಿಗೂ ಚೆನ್ನಾಗಿ ಗೊತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ರಮ್ಯಾ ಎನ್ನುವುದು ಯಾರ ಹೆಸರು ಬೇಕಾದರೂ ಆಗಬಹುದಲ್ಲವೇ ಎನ್ನುತ್ತಾರೆ ಅಶೋಕ್ ಕಶ್ಯಪ್.

ಚಿತ್ರದಲ್ಲಿ ಟಿ.ಎನ್.ಸೀತಾರಾಮ್, ದಿವ್ಯ ಉರುಡುಗ, ತಬಲಾ ನಾಣಿ, ವೀಣಾ ಸುಂದರ್ ಕೂಡ ಅಭಿನಯಿಸಿದ್ದಾರೆ. ಸಂತೋಷ್ ನಾರಾಯಣನ್ ಮತ್ತು ಚಿನ್ನ ಅವರ ಸಂಗೀತ, ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com