ಬೆಂಗಳೂರಿನಲ್ಲಿ ಕೃತಿ ಕರಬಂಧ, ಪುಳಕಿತ್ ಹೋಳಿ ಆಚರಣೆ

ಬಾಲಿವುಡ್ ನಲ್ಲಿ ಸದ್ಯ ಬ್ಯುಸಿಯಾಗಿರುವ ನಟಿ ಕೃತಿ ಕರಬಂಧ ವೀರೈ ಕಿ ವೆಡ್ಡಿಂಗ್ ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ...
ಕೃತಿ ಕರಬಂಧ ಮತ್ತು ಪುಳಕಿತ್ ಸಾಮ್ರಾಟ್
ಕೃತಿ ಕರಬಂಧ ಮತ್ತು ಪುಳಕಿತ್ ಸಾಮ್ರಾಟ್
ಬೆಂಗಳೂರು: ಬಾಲಿವುಡ್ ನಲ್ಲಿ ಸದ್ಯ ಬ್ಯುಸಿಯಾಗಿರುವ ನಟಿ ಕೃತಿ ಕರಬಂಧ ವೀರೈ ಕಿ ವೆಡ್ಡಿಂಗ್ ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಅಶು ತ್ರಿಖಾ ಅವರ ನಿರ್ದೇಶನ ವೀರೈ ಕಿ ವೆಡ್ಡಿಂಗ್ ಸಿನಿಮಾದಲ್ಲಿ  ನಟಿಸಿರುವ ಪುಳಕಿತ್ ಸಾಮ್ರಾಟ್ ಕೂಡ ಪ್ರಮೋಷನ್ ಗಾಗಿ ನಗರಕ್ಕೆ ಆಗಮಿಸಿದ್ದು, ಇಬ್ಬರು ಹೋಳಿ ಆಚರಣೆಯ ಮೂಡ್ ನಲ್ಲಿದ್ದಾರೆ.
ನನ್ನ ಕುಟುಂಬದ ಸದಸ್ಯರ ಜೊತೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ, ಜೊತೆಗೆ ಮನೆಯ ಊಟ ತಿನ್ನಲು ಆಗುತ್ತಿಲ್ಲ ಎಂದು ಕೃತಿ ಬೇಸರ ವ್ಯಕ್ತ ಪಡಿಸಿದ್ದಾರೆ. ಮಾರ್ಚ್ 2 ರಂದು ವಿರೈ ಕಿ ವೆಡ್ಡಿಂಗ್ ರಿಲೀಸ್ ಆಗಲಿದೆ, ಹೀಗಾಗಿ  ಹೋಳಿಯಲ್ಲಿ ಮಿಂದೇಳಲು ಕೃತಿ ಕಾಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com