ಪಕ್ಷಿಗಳ ಜತೆ ಚಿತ್ರೀಕರಣ ನಿಜಕ್ಕೂ ದೊಡ್ಡ ಸವಾಲು: 'ಬಜಾರ್' ನಿರ್ದೇಶಕ ಸುನಿ

ಗೋಲ್ಡನ್ ಸ್ಟಾರ್ ಗಣೇಶ್ ಜತೆ ಚಮಕ್ ಮಾಡಿದ್ದ ಸಿಂಪಲ್ ಸುನಿ ಇದೀಗ ಬಜಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ...
ಧನ್ವೀರ್, ಅದಿತಿ ಪ್ರಭುದೇವಾ
ಧನ್ವೀರ್, ಅದಿತಿ ಪ್ರಭುದೇವಾ
ಗೋಲ್ಡನ್ ಸ್ಟಾರ್ ಗಣೇಶ್ ಜತೆ ಚಮಕ್ ಮಾಡಿದ್ದ ಸಿಂಪಲ್ ಸುನಿ ಇದೀಗ ಬಜಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 
ಬಜಾರ್ ಚಿತ್ರಕ್ಕಾಗಿ ಸುನಿ ಪಾರಿವಾಳಗಳನ್ನು ಬಳಸಿಕೊಳ್ಳುತ್ತಿದ್ದ ಪಕ್ಷಗಳ ಜತೆ ಚಿತ್ರೀಕರಣ ನಿಜಕ್ಕೂ ದೊಡ್ಡ ಸವಾಲು. ಅವುಗಳ ಮೂಡ್ ಗೆ ತಕ್ಕಂತೆ ನಾವು ಚಿತ್ರೀಕರಿಸಬೇಕಿದೆ ಎಂದು ಹೇಳಿದ್ದಾರೆ. 
ಚಿತ್ರದಲ್ಲಿ ನಾಯಕ ಧನ್ವೀರ್ ದೇಹ ದಂಡಿಸಿ ಸಿಕ್ಸ್ ಪ್ಯಾಕ್ ಮಾಡಿ, ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ಚಿತ್ರದಲ್ಲೇ ಭರ್ಜರಿಯಾಗಿ ಎಂಟ್ರಿ ಕೊಡಲು ಧನ್ವೀರ್ ರೆಡಿಯಾಗಿದ್ದಾರೆ. 
ಚಿತ್ರ ಪಾರಿವಾಳ ರೇಸ್ ಜೊತೆಗೆ ಸಾಗುತ್ತದೆ. ಇದಕ್ಕಾಗಿ ಸುನಿ 500ಕ್ಕೂ ಹೆಚ್ಚು ಪಾರಿವಾಳಗಳನ್ನು ಬಳಸಿಕೊಳ್ಳುತ್ತಿದ್ದಾರೆ. 
ಬಜಾರ್ ಚಿತ್ರವನ್ನು ಭಾರತಿ ಫಿಲಂ ಪ್ರೊಡಕ್ಷನ್ಸ್ ನಡಿ ತಿಮ್ಮೇಗೌಡ ನಿರ್ಮಿಸುತ್ತಿದ್ದು ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದ್ದು ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಅದಿತಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com