ಕೆಜಿಎಫ್ ನಂತರ ನಿರ್ದೇಶಕ ಅನಿಲ್ ಕುಮಾರ್ ಜೊತೆ ನಟ ಯಶ್ ಮುಂದಿನ ಸಿನಿಮಾ

ಕೆಜಿಎಫ್ ಸಿನಿಮಾ ಪೂರ್ಣಗೊಂಡ ನಂತರ ನಟ ಯಶ್ ನಿರ್ದೇಶಕ ಅನಿಲ್ ಕುಮಾರ್ ಜೊತೆ ಮುಂದಿನ ಸಿನಿಮಾ ಮಾಡಲಿದ್ದಾರೆ...
ಯಶ್
ಯಶ್
Updated on: 
ಬೆಂಗಳೂರು: ಕೆಜಿಎಫ್ ಸಿನಿಮಾ ಪೂರ್ಣಗೊಂಡ ನಂತರ ನಟ ಯಶ್ ನಿರ್ದೇಶಕ ಅನಿಲ್ ಕುಮಾರ್ ಜೊತೆ ಮುಂದಿನ ಸಿನಿಮಾ ಮಾಡಲಿದ್ದಾರೆ.
ಮಂಡ್ಯ ಗ್ರಾಮೀಣ ಹಿನ್ನೆಲೆಯುಳ್ಳ  ರಾಜಾಹುಲಿ ಮತ್ತು ಕಿರಾತಕ ಈ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದದ್ದು ಮಾತ್ರವಲ್ಲದೇ ನಟ ಯಶ್ ಗೆ ಅಭಿಮಾನಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದ ಸಿನಿಮಾಗಳು. ಮತ್ತೆ ಅಂಥದೇ ಹೋಲಿಕೆಯುಳ್ಳ ಪಾತ್ರ ಮಾಡಬೇಕು ಎಂಬುದು ಯಶ್ ಅಭಿಮಾನಿಗಳ ಆಶಯವಾಗಿತ್ತು, ಐದು ವರ್ಷಗಳ ನಂತರ ಈಗ ಮತ್ತೆ ಅಂಥಹುದ್ದೇ ಪಾತ್ರದಲ್ಲಿ ಯಶ್ ಮಿಂಚಲಿದ್ದಾರೆ.
ಅನಿಲ್ ಕುಮಾರ್ ಸಿನಿಮಾಗೆ ಯಶ್ ಸಹಿ ಹಾಕಿದ್ದು, ಅಫಿಶಿಯಲ್ ಟೈಟಲ್ ಘೋಷಣೆಗಾಗಿ ಕಾಯುಲಾಗುತ್ತಿದೆ, ಮ್ಯಾಗ್ನಮ್ ಒಫಸ್ ಸಂಸ್ಥೆ ನಿರ್ಮಾಣದ ಕೆಜಿಎಫ್ ಪೂರ್ಣಗೊಂಡ ನಂತರವೇ ಈ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ,
ಕೆಜಿಎಫ್ ನಂತರ ಯಶ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬರಲಿವೆ, ಅನಿಲ್ ಕುಮಾರ್ ಸಿನಿಮಾ ಅಲ್ಲದೇ, ನಿರ್ದೇಶಕ ಹರ್ಷ ಮತ್ತು ನರ್ಥನ್ ಅವರ ಪ್ರಾಜೆಕ್ಟ್ ಗೂ ಸಹಿ ಮಾಡಿದ್ದಾರೆ. ಹರ್ಷ ಬೇರೆ ಬೇರೆ ಪ್ರಾಜೆಕ್ಟ್ ಗಾಗಿ ಕಥೆ, ಸಿದ್ದಪಡಿಸುಪತ್ತಿರುವ ಹಿನ್ನೆಲೆಯಲ್ಲಿ ಯಶ್ ಅನಿಲ್ ಕುಮಾರ್ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ, ನಂತರ ಆ ಇಬ್ಬರು ನಿರ್ದೇಶಕರ ಸಿನಿಮಾ ಮಾಡಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com