ಯಶ್ ಬಗ್ಗೆ ಒರಟು ಕಮೆಂಟ್ ಪೋಸ್ಟ್ ಮಾಡ್ಬೇಡಿ: ಅಭಿಮಾನಿಗಳಿಗೆ ನಟ ಸುದೀಪ್ ಮನವಿ

ನನ್ನ ಅಭಿಮಾನಿಗಳು ಮತ್ತು ಸ್ನೇಹಿತರಲ್ಲಿ ಯಶ್ ಬಗ್ಗೆ ಯಾವುದೇ ಹಾರ್ಶ್ ಕಮೆಂಟ್ ಪೋಸ್ಟ್ ...
ಸುದೀಪ್-ಯಶ್
ಸುದೀಪ್-ಯಶ್
Updated on

ಬೆಂಗಳೂರು: ನನ್ನ ಅಭಿಮಾನಿಗಳು ಮತ್ತು ಸ್ನೇಹಿತರಲ್ಲಿ ಯಶ್ ಬಗ್ಗೆ ಯಾವುದೇ ಹಾರ್ಶ್ ಕಮೆಂಟ್ ಪೋಸ್ಟ್ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ನಟ ಸುದೀಪ್ ಟ್ವೀಟ್ ಮಾಡಿದ್ದಾರೆ.

ನನ್ನ ಫಿಟ್ನೆಸ್ ಚಾಲೆಂಜನ್ನು ಸ್ವೀಕರಿಸಿ ಯಶ್ ಅವರು ಜಿಮ್ ನಲ್ಲಿ ಸ್ನೇಹಿತನ ಕೈಯಲ್ಲಿ ವರ್ಕೌಟ್ ಮಾಡಿಸುತ್ತಿರುವ ವಿಡಿಯೊ ಕಳುಹಿಸಿದ್ದು ಅದನ್ನು ಮಾತ್ರ ನಾನು ನೋಡುತ್ತೇನೆ. ಬೇರೆ ಯಾವ ವಿಚಾರಗಳ ಬಗ್ಗೆಯೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರು ಫಿಟ್ನೆಸ್ ಚಾಲೆಂಜ್ ನ್ನು ಸ್ವೀಕರಿಸಿದ್ದು ಮುಖ್ಯವಾಗುತ್ತದೆ. ನನ್ನ ಮನವಿಗೆ ನೀವು ಅಭಿಮಾನಿಗಳು ಬೆಲೆ ನೀಡುತ್ತೀರೆಂದು ಭಾವಿಸುತ್ತೇನೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಅಷ್ಟುಕ್ಕೂ ಏನಾಯಿತು?:
ಫಿಟ್ನೆಸ್ ಅಭಿಯಾನದಡಿಯಲ್ಲಿ ಕ್ರಿಕೆಟಿಗ ವಿನಯ್ ಸವಾಲನ್ನು ಸ್ವೀಕರಿಸಿ ಜಿಮ್ ನಲ್ಲಿ ವರ್ಕೌಟ್ ಮಾಡುವ ವಿಡಿಯೊ ಶೇರ್ ಮಾಡಿದ್ದ ನಟ ಸುದೀಪ್ ನಂತರ ನಟರಾದ ಶಿವರಾಜ್ ಕುಮಾರ್, ಯಶ್ ಬಾಲಿವುಡ್ ನಟರಾದ ರಿತೇಶ್ ದೇಶ್ ಮುಖ್, ಸೊಹೈಲ್ ಖಾನ್  ಮತ್ತು ಪತ್ನಿ ಪ್ರಿಯಾಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದರು.

ಸುದೀಪ್ ಹಾಕಿದ್ದ ಫಿಟ್ನೆಸ್ ಚಾಲೆಂಜ್ ಅನ್ನು ಸ್ವೀಕರಿಸಿದ ಯಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಫಿಟ್ನೆಸ್ ವಿಡಿಯೊವನ್ನು ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಕೊಂಚ ಟ್ವಿಸ್ಟ್ ಕೊಟ್ಟಿದ್ದರು. ಯಶ್ ತಾವು ವರ್ಕ್ ಔಟ್ ಮಾಡುವ ಬದಲು ಚೇತನ್ ಎಂಬ ತಮ್ಮ ಬಾಲ್ಯ ಸ್ನೇಹಿತರೊಬ್ಬರಿಂದ ವರ್ಕ್ ಔಟ್ ಮಾಡಿಸಿದ್ದಾರೆ. ಆ ವಿಡಿಯೋ ನೋಡುವುದಕ್ಕೆ ಸಖತ್ ಫನ್ನಿಯಾಗಿದೆ. ನಾವು ಫಿಟ್ ಆಗುವುದರೊಂದಿಗೆ ನಮ್ಮ ಜೊತೆಗೆ ಇರುವವರನ್ನು ಫಿಟ್ ಆಗಿ ಇಡೋಣ ಎಂದು ವಿಡಿಯೊದಲ್ಲಿ ಯಶ್ ಹೇಳಿದ್ದರು.

ವಿಡಿಯೊದಲ್ಲಿ ಯಶ್ ವಯಸ್ಸಿನಲ್ಲಿ ಮತ್ತು ಸಿನಿಮಾರಂಗದ ವೃತ್ತಿಯಲ್ಲಿ ಹಿರಿಯರಾದ ಸುದೀಪ್ ಅವರನ್ನು ಹೆಸರು ಹಿಡಿದು ಸಂಬೋಧಿಸಿದ್ದು ಅದು ಸುದೀಪ್ ಅವರ ಹಲವು ಅಭಿಮಾನಿಗಳಿಗೆ ಇಷ್ಟವಾಗಿರಲಿಲ್ಲ. ಯಶ್ ಅವರ ಫೇಸ್ ಬುಕ್ ಪುಟದಲ್ಲಿ ಇದಕ್ಕೆ ಹಿಗ್ಗಾಮುಗ್ಗಾ ಬೈದಿದ್ದರು, ಕೆಲವರು ಒರಟು ಕಾಮೆಂಟ್ ಗಳನ್ನು ಹಾಕಿದ್ದರು.

ಇದನ್ನು ಕಂಡ ಸುದೀಪ್ ಅವರು ವಿವಾದವೇಳುವುದು ಬೇಡವೆಂದು ಅದಕ್ಕೆ ಇತಿಶ್ರೀ ಹಾಕಲು ಮುಂದಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com