ಇಂದ್ರಜಿತ್ ಲಂಕೇಶ್ ರ 'ಶಕೀಲ' ಬಾಲಿವುಡ್ ಚಿತ್ರಕ್ಕೆ ಪಂಕಜ್ ತ್ರಿಪಾಠಿ ಆಗಮನ

ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಶಕೀಲಾ ಜೀವನಚರಿತ್ರೆಯ ಚಿತ್ರದ ಮೂಲಕ ಬಾಲಿವುಡ್ ಗೆ ...
ರಿಚಾ ಚಡ್ಡಾ ಮತ್ತು ಇಂದ್ರಜಿತ್ ಲಂಕೇಶ್
ರಿಚಾ ಚಡ್ಡಾ ಮತ್ತು ಇಂದ್ರಜಿತ್ ಲಂಕೇಶ್
Updated on: 

ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಶಕೀಲಾ ಜೀವನಚರಿತ್ರೆಯ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದು ಅದರಲ್ಲಿ ರಿಚಾ ಚಡ್ಡಾ ಅಭಿನಯಿಸಲಿದ್ದಾರೆ ಎಂದು ಈ ಹಿಂದೆ ಓದಿದ್ದೆವು. ಚಿತ್ರದಲ್ಲಿ ಪಂಕಜ್ ತ್ರಿಪಾಠಿ ಎಂಬುವವರು ಮತ್ತೊಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಪಂಕಜ್ ಭಾರತೀಯ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ನ್ಯೂಟನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅದನ್ನು ಸಾಬೀತುಪಡಿಸಿದ್ದಾರೆ ಕೂಡ. ನ್ಯೂಟನ್ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಕೂಡ ಪಡೆದಿದ್ದಾರೆ. ವೈಯಕ್ತಿಕವಾಗಿ ನಾನು ಅವರ ದೊಡ್ಡ ಅಭಿಮಾನಿ. ಆ ಪಾತ್ರಕ್ಕೆ ಅವರು ಹೊಂದಿಕೆಯಾಗುತ್ತಾರೆಂದು ಅವರನ್ನು ಕೇಳಿಕೊಂಡೆ. ಅವರು ಒಪ್ಪಿಕೊಂಡರು ಕೂಡ ಎಂದರು.

ಚಿತ್ರದ ಶೂಟಿಂಗ್ ಆರಂಭಕ್ಕೆ ಮುನ್ನ ಪೂರ್ವ ತಯಾರಿ ಹಂತ ಕೆಲಸ ಮುಗಿದಿದೆ. ರಿಚಾ ಮತ್ತು ಪಂಕಜ್ ಅವರಿಗೆ ಚಿತ್ರದ ಸಂಭಾವನೆ ಕೂಡ ನೀಡಲಾಗಿದೆ. ಚಿತ್ರದ ಇತರ ಪಾತ್ರಗಳಿಗೆ ಕಲಾವಿದರ ಆಯ್ಕೆ ನಡೆಯುತ್ತಿದೆ ಎನ್ನುತ್ತಾರೆ ಇಂದ್ರಜಿತ್ ಲಂಕೇಶ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com