ಸಿನಿಮಾ ಸುದ್ದಿ

'ಕೆಲವು ದಿನಗಳ ನಂತರ' ಸೆಟ್ ನಲ್ಲಿ ಎರಡು ಬಾರಿ ಪ್ರಜ್ಞಾಹೀನಳಾಗಿದ್ದೆ: ಸೋನು ಪಾಟೀಲ್

'ಕೆಲವು ದಿನಗಳ ನಂತರ' ಸೆಟ್ ನಲ್ಲಿ  ಎರಡು ಬಾರಿ ಪ್ರಜ್ಞಾಹೀನಳಾಗಿದ್ದೆ: ಸೋನು ಪಾಟೀಲ್
ಸೋನು ಪಾಟೀಲ್
Published On :
ಬೆಂಗಳೂರು: ಕೆಲವು ದಿನಗಳ ನಂತರ ಶೂಟಿಂಗ್ ಸೆಟ್ ನಲ್ಲಿ ತಮಗಾದ ಭಯಾನಕ ಅನುಭವದ ಬಗ್ಗೆ ನಟಿ ಸೋನು ಪಾಟೀಲ್. ಹೇಳಿದ್ದಾರೆ. 
ಜೂ.22 ರಂದು ಚಿತ್ರ ತೆರೆಕಾಣುತ್ತಿದ್ದು, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರಂತೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುವವರು ಈ ಸಿನಿಮಾ ನೋಡಲೇಬೇಕಂತೆ. ‘ಅನೇಕರು ಫೇಸ್​ಬುಕ್ ಹಾಗೂ ವಾಟ್ಸ್​ಆಪ್​ಗಳಲ್ಲಿ ಸದಾ ಮುಳುಗಿರುತ್ತಾರೆ. ಅಂಥವರು ‘ಕೆಲವು ದಿನಗಳ ನಂತರ’ ಚಿತ್ರವನ್ನು ವೀಕ್ಷಿಸಲೇ ಬೇಕು. ಆನ್​ಲೈನ್​ಗೆ ಅಂಟಿಕೊಳ್ಳುವ ಬದಲು ಮತ್ತಾವ ರೀತಿಯಲ್ಲಿ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ಹೇಳುತ್ತಿದ್ದೇವೆ’ ಎನ್ನುತ್ತಾರೆ.
ಕೆಲವು ದಿನಗಳ ನಂತರ ಹಾರರ್ ಚಿತ್ರ ವಾಗಿದೆ. ಅಚ್ಚರಿಯ ವಿಚಾರ ಏನೆಂದರೆ ಚಿತ್ರತಂಡಕ್ಕೆ ಶೂಟಿಂಗ್ ವೇಳೆ ಹಾರರ್ ಅನುಭವ ಆಗಿತ್ತಂತೆ. ‘ನನ್ನ ವೃತ್ತಿಜೀವನದಲ್ಲಿ ಇದು ಮೊದಲ ಹಾರರ್ ಚಿತ್ರ. ಚಿತ್ರದ ಬಹುತೇಕ ಶೂಟಿಂಗ್ ರಾತ್ರಿ ವೇಳೆಯೇ ನಡೆದಿತ್ತು. ಚಿತ್ರೀಕರಣ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನಾನು ತಲೆ ತಿರುಗಿ ಬಿದ್ದೆ. ಕಣ್ಣು ಬಿಟ್ಟು ನೋಡಿದಾಗ ಆಸ್ಪತ್ರೆಯಲ್ಲಿದ್ದೆ. ಯಾಕೆ ಹೀಗಾಯಿತು ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ.  ಶುಭಾ ಪೂಂಜಾ, ಪವನ್, ಲೋಕೇಶ್ ಮತ್ತು ದ್ರಾವ್ಯಾ ಶೆಟ್ಟಿ ಮತ್ತಿತರರು ನಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.