'ಕವಚ'ದಲ್ಲಿ ವಿಭಿನ್ನ ಗೆಟಪ್ ನಲ್ಲಿ ಶಿವರಾಜ್ ಕುಮಾರ್

ನಟ ಶಿವರಾಜ್ ಕುಮಾರ್ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಲು ಇನ್ನೂ ಹೊತೊರೆಯುತ್ತಾರೆ...
ಕವಚ ಚಿತ್ರದ ದೃಶ್ಯ
ಕವಚ ಚಿತ್ರದ ದೃಶ್ಯ
Updated on

ನಟ ಶಿವರಾಜ್ ಕುಮಾರ್ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಲು ಇನ್ನೂ ಹೊತೊರೆಯುತ್ತಾರೆ. ಪ್ರತಿ ಪಾತ್ರಗಳಲ್ಲಿ ಅವರು ಅಭಿಮಾನಿಗಳಿಗೆ ಕಾತರ ಹುಟ್ಟಿಸುತ್ತಾರೆ.
 
ಟಗರು ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಅವರ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ನೋಡಲು ಜನರು ಕಾತರರಾಗಿದ್ದಾರೆ. ಅವರ ಮುಂದಿನ ಚಿತ್ರ ಕವಚದಲ್ಲಿ ಇನ್ನೂ ವಿಶಿಷ್ಟ ಪಾತ್ರವನ್ನು ನೋಡಬಹುದು.

ಶಿವಮೊಗ್ಗ, ಸಾಗರ ಮತ್ತು ಸಿಗಂದೂರುಗಳಲ್ಲಿ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬಂದಿರುವ ಚಿತ್ರತಂಡ ಮಲಯಾಳಂನಲ್ಲಿ ಮೋಹನ್ ಲಾಲ್ ನಟನೆಯ ಪ್ರಿಯದರ್ಶನ್ ನಿರ್ದೇಶನದ ಕ್ರೈಮ್ ಆಧಾರಿತ ಒಪ್ಪಮ್ ಚಿತ್ರದಿಂದ ಸ್ಪೂರ್ತಿ ಪಡೆದು ಕವಚ ಚಿತ್ರವನ್ನು ಜಿವಿಆರ್ ವಾಸು ನಿರ್ದೇಶಿಸುತ್ತಿದ್ದಾರೆ. ಇಲ್ಲಿ ಶಿವರಾಜ್ ಕುಮಾರ್ ದೃಷ್ಟಿದೋಷವುಳ್ಳ ವ್ಯಕ್ತಿಯಾಗಿ ನಟಿಸುತ್ತಿದ್ದಾರೆ. ಇದರ ಕೆಲವು ಫೋಟೋಗಳು ಸಿಟಿ ಎಕ್ಸ್ ಪ್ರೆಸ್ ಗೆ ಲಭ್ಯವಾಗಿವೆ.

ಶಿವರಾಜ್ ಕುಮಾರ್ ಅವರ ಜೊತೆ ಇಶಾ ಕೊಪ್ಪಿಕರ್, ಬಾಲ ಕಲಾವಿದೆ ಮೀನಾಕ್ಷಿ, ತಬಲಾ ನಾಣಿ. ಕೃತಿಕಾ ಜಯರಾಮ್, ವಶಿಷ್ಟ ಸಿಂಹ, ರವಿ ಕಾಳೆ ಮೊದಲಾದವರು ನಟಿಸುತ್ತಿದ್ದಾರೆ. ಸಂಭಾಷಣೆಯ ಭಾಗವನ್ನು ಚಿತ್ರತಂಡ ಮುಗಿಸಿದ್ದು ಕೆಲವು ಫೈಟಿಂಗ್ ಸೀನ್ ಗಳು ಬಾಕಿ ಉಳಿದಿವೆ. ರವಿ ವರ್ಮ ಸಾಹಸ ದೃಶ್ಯಗಳನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಕೆಲವು ಹಾಡುಗಳ ಚಿತ್ರೀಕರಣ ಕೂಡ ಬಾಕಿಯಿದೆ.

ಹಯಗ್ರೀವ ಮೂವಿ ಅದಿಷ್ಟಾನ, ಎಂವಿ ಸತ್ಯನಾರಾಯಣ ಮತ್ತು ಎ. ಸಂಪತ್ ಒಟ್ಟಾಗಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com