ಬಾಲಿವುಡ್ ಚಿತ್ರವಾದರೆ ಮಾತ್ರ ಆರ್'ಜಿವಿ ಆಫರ್'ಗೆ ಓಕೆ; ನಿರ್ದೇಶಕ ಸೂರಿ

ನಟ ಶಿವರಾಜ್ ಕುಮಾರ್ ಅವರು ಅಭಿನಯಿಸಿರುವ ಟಗರು ಚಿತ್ರಕ್ಕೆ ನಿರ್ದೇಶಕ ಸೂರಿಗೆ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಪ್ರತೀ ದಿನ ಚಿತ್ರ ಒಂದಲ್ಲ ಒಂದು ದಾಖಲೆಗಳನ್ನು ಬರೆಯುತ್ತಲೇ ಇದೆ...
ಬಾಲಿವುಡ್ ಚಿತ್ರವಾದರೆ ಮಾತ್ರ ಆರ್'ಜಿವಿ ಆಫರ್'ಗೆ ಓಕೆ; ನಿರ್ದೇಶಕ ಸೂರಿ
ಬಾಲಿವುಡ್ ಚಿತ್ರವಾದರೆ ಮಾತ್ರ ಆರ್'ಜಿವಿ ಆಫರ್'ಗೆ ಓಕೆ; ನಿರ್ದೇಶಕ ಸೂರಿ
ನಟ ಶಿವರಾಜ್ ಕುಮಾರ್ ಅವರು ಅಭಿನಯಿಸಿರುವ ಟಗರು ಚಿತ್ರಕ್ಕೆ ನಿರ್ದೇಶಕ ಸೂರಿಗೆ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಪ್ರತೀ ದಿನ ಚಿತ್ರ ಒಂದಲ್ಲ ಒಂದು ದಾಖಲೆಗಳನ್ನು ಬರೆಯುತ್ತಲೇ ಇದೆ. ಇದೀಗ ಚಿತ್ರಕ್ಕೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಟಗರು ಚಿತ್ರ ವೀಕ್ಷಿಸಿರುವ ರಾಮ್ ಗೋಪಾಲ್ ವರ್ಮಾ ಅವರು, ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ನಿರ್ದೇಶಕ ಸೂರಿಯವರಿಗೆ ಚಿತ್ರವೊಂದಕ್ಕೆ ಆಫರ್ ಕೂಡ ನೀಡಿದ್ದಾರೆ. 
ರಾಮ್ ಗೋಪಾಲ್ ವರ್ಮಾ ಅವರ ಈ ಆಫರ್ ಗೆ ಪ್ರತಿಕ್ರಿಯೆ ನೀಡಿರುವ ಸೂರಿಯವರು, ರಾಮ್ ಗೋಪಾಲ್ ವರ್ಮಾ ಅವರು ಚಿತ್ರಕಥೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರಕಥೆಯನ್ನು ಹೇಗೆ ಬರೆದಿದ್ದಾರೆಂಬುದನ್ನು ತಿಳಿಯಲು ರಾಮ್ ಗೋಪಾಲ್ ವರ್ಮಾ ಕಾತರರಾಗಿದ್ದಾರೆ. ಇದನ್ನು ಅವರಿಂದ ಕೇಳಲು ಬಹಳ ಸಂತಸವಾಗುತ್ತಿದೆ. ಮಾನ್ವಿಯಾ ಹಾಗೂ ಧನಂಜಯ್ ಅವರ ಪಾತ್ರವನ್ನು ಅವರು ಬಹಳ ಇಷ್ಟಪಟ್ಟಿದ್ದಾರೆ. ಇಬ್ಬರೂ ಜೊತೆಗೂಡಿ ಕೆಲಸ ಮಾಡೋಣ ಎಂದೂ ಕೂಡ ಹೇಳಿದ್ದಾರೆಂದು ಹೇಳಿದ್ದಾರೆ. 
ಚಿತ್ರವೊಂದಕ್ಕೆ ಶಿವರಾಜ್ ಕುಮಾರ್ ಕಾಲ್ ಶೀಟ್ ಪಡೆಯಲು ರಾಮ್ ಗೋಪಾಲ್ ವರ್ಮಾ ಅವರು ನಗರಕ್ಕೆ ಆಗಮಿಸಿದ್ದು, ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಟಗರು ಚಿತ್ರವನ್ನು ವೀಕ್ಷಿಸಿದ್ದಾರೆ. 
ಕೆಂಡ ಸಂಪಿಗೆ ಬಳಿಕ ನನ್ನ ಎರಡನೇ ಚಿತ್ರವನ್ನು ಆರ್'ಜಿವಿ ನೋಡಿದ್ದಾರೆ. ಅಮಿರ್ ಖಾನ್ ಮತ್ತು ಸಂಜಯ್ ಲೀಲಾ ಬನ್ಸಾಲಿ ಹಾಗೂ ರಾಮ್ ಗೋಪಾಲ್ ವರ್ಮಾ ಅವರು ಮಾಡಿದ್ದ ಸಿನಿಮಾಗಳನ್ನು ನೋಡಿ ಬೆಳೆದವನು ನಾನು ಇಂದು ನನ್ನ ಚಿತ್ರವನ್ನು ಅವರು ನೋಡುತ್ತಿದ್ದಾರೆಂದರೆ ಬಹಳ ಸಂತೋಷವಾಗುತ್ತಿದೆ. ಅನುರಾಗ್ ಕಶ್ಯಪ್ ನನಗೆ ಬಹಳ ಇಷ್ಟವಾದ ವ್ಯಕ್ತಿ. ಆರ್'ಜಿವಿಯವರ ಸರ್ಕಾರ್ ರಾಜ್ ಮತ್ತು ಅಟ್ಯಾಕ್ ಆಪ್ 26/11 ಚಿತ್ರ ನನಗೆ ಬಹಳ ಇಷ್ಟ ಎಂದು ತಿಳಿಸಿದ್ದಾರೆ. 
ಆರ್'ಜಿವಿ ಯವರು ನೀಡಿರುವ ಆಫರ್ ಅನ್ನು ತಿರಸ್ಕರಿಸದ ಸೂರಿಯವರು, ಇದು ಇಂದು ಮತ್ತು ನಾಳೆ ನೀಡುವ ವಿಚಾರವಲ್ಲ. ಇದಕ್ಕೆ ಮಾನಸಿಕವಾಗಿಯೂ ಸಾಕಷ್ಟು ಸಿದ್ಧತೆಗಳನ್ನು ನಡೆಸುವ ಅಗತ್ಯವಿದೆ. ಹಿಂದಿ ಸಣ್ಣ ಮಾರುಕಟ್ಟೆಯಲ್ಲ. ಯಾವ ರೀತಿಯ ಸಿನಿಮಾವನ್ನು ಸಿದ್ಧಪಡಿಸಬೇಕೆಂದುನ್ನು ನಾನು ಮೊದಲು ತಿಳಿದುಕೊಳ್ಳಬೇಕು. ಚಿತ್ರ ಮಾಡಲು ಸಾಕಷ್ಟು ವಿಭಾಗಗಳಿರುತ್ತವೆ. ಪ್ರಯೋಗಾತ್ಮಕತ ಹಾಗೂ ಬಿಗ್ ಬಜೆಟ್ ಸಿನಿಮಾಗಳಿರುತ್ತವೆ. ಎಲ್ಲದಕ್ಕೂ ಸಮಯ ಹಾಗೂ ಕೆಲಸ ಮಾಡುವ ಅಗತ್ಯವಿದೆ. ನಾವಿಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದು, ಈ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆಂದಿದ್ದಾರೆ. 
ಇದೇ ವೇಳೆ ಬಾಲಿವುಡ್ ಚಿತ್ರವಾದರೆ ಮಾತ್ರ ಆರ್'ಜಿವಿ ಜೊತೆಗೆ ಚಿತ್ರ ಮಾಡಲು ಸಿದ್ಧ ಎಂದು ಇದೇ ವೇಳೆ ಸೂರಿಯವರು ಹೇಳಿದ್ದು, ರಾಮ್ ಗೋಪಾಲ್ ವರ್ಮಾ ಅವರು ದೊಡ್ಡ ಬ್ಯಾನರ್ ಹೊಂದಿದ್ದಾರೆ. ಬಾಲಿವುಡ್ ಚಿತ್ರವಾದರೆ ಮಾತ್ರ ಅವರೊಂದಿಗೆ ಕೆಲಸ ಮಾಡಲು ಇಚ್ಛಿಸುತ್ತೇನೆ. ಪ್ರಸ್ತುತ ವರ್ಮಾ ಅವರು ಅದೇ ಆಫರ್ ನೀಡಿದ್ದರೆ, ಬಹಳ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com