ಕುಮಾರಸ್ವಾಮಿ ಅವರಿಗೆ ಶುಭ ಹಾರೈಸಲು ಬಂದಿದ್ದ ಶಿವರಾಜ್‍ಕುಮಾರ್ ಸುದ್ದಿಗಾರರೊಡನೆ ಮಾತನಾಡಿ "ಮುಖ್ಯಮಂತ್ರಿಗಳಿಗೆ ಶುಭ ಹಾರೈಸಲು ಬಂದಿದ್ದೆ, ಇದರಲ್ಲಿ ಯಾವ ರಾಜಕೀಯ ಇಲ್ಲ. ಚಲನಚಿತ್ರ ನಿರ್ಮಾಣ, ಹಿನ್ನೆಲೆಯಿಂದ ಬಂದ ಇವರು ಎರಡನೇ ಬಾರಿಗೆ ರಾಜ್ಯದ ಮುಖ್ಯಮ್ಮಂತ್ರಿಗಳಾಗಿದ್ದಾರೆ. ನಮ್ಮ ಹಾಗೂ ದೇವೇಗೌಡರ ಕುಟುಂಬದ ನಂಟು ಬಹಳ ಹಳೆಯದು" ಎಂದರು.