ಕೆಜಿಎಫ್ ಅಬ್ಬರದ ಎಫೆಕ್ಟ್: ಸುದೀಪ್ ಪೈಲ್ವಾನ್ ಕೂಡ 7 ಭಾಷೆಗಳಲ್ಲಿ ರಿಲೀಸ್!

5 ಭಾಷೆಗಳಲ್ಲಿ ಯಶ್ ರ ಕೆಜಿಎಫ್ ಚಿತ್ರದ ಟ್ರೈಲರ್ ಅಬ್ಬರಿಸುತ್ತಿರುವಂತೆಯೇ ಇತ್ತ ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ಅನ್ನು ಕೂಡ 7 ಭಾಷೆಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: 5 ಭಾಷೆಗಳಲ್ಲಿ ಯಶ್ ರ ಕೆಜಿಎಫ್ ಚಿತ್ರದ ಟ್ರೈಲರ್ ಅಬ್ಬರಿಸುತ್ತಿರುವಂತೆಯೇ ಇತ್ತ ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ಅನ್ನು ಕೂಡ 7 ಭಾಷೆಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ರಾಕಿಂಗ್​ ಸ್ಟಾರ್​ ಯಶ್​​ ನಟನೆಯ ಕೆಜಿಎಫ್​​ ಕನ್ನಡ ಸಿನಿಮಾರಂಗದಲ್ಲೇ ಹೊಸ ಇತಿಹಾಸ ನಿರ್ಮಿಸಿದ ಚಿತ್ರ. ಭಾರತದ 5 ಭಾಷೆಗಳಲ್ಲಿ ತೆರೆಕಾಣುತ್ತಿರುವ ಕೆಜಿಎಫ್​ ಈಗಾಗಲೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದೆ. ಟ್ರೇಲರ್ ಬಿಡಗುಡೆಯಾದಾಗಿನಿಂದ ಇದ್ದ ಬದ್ದ ರೆಕಾರ್ಡ್​ಗಳನ್ನೆಲ್ಲಾ ಧೂಳಿಪಟ ಮಾಡುತ್ತಿದೆ. ಕೆಜಿಎಫ್ ಚಿತ್ರ ಟ್ರೈಲರ್ ಐದು ಭಾಷೆಗಳಲ್ಲಿ ಧೂಳೆಬ್ಬಿಸಿರುವಂತೆಯೇ ಇದರಿಂದ ಸ್ಪೂರ್ತಿಗೊಂಡಂತಿರುವ ಸ್ಯಾಂಡಲ್ ವುಡ್ ಇತರೆ ನಿರ್ಮಾಪಕರೂ ಕೂಡ ತಮ್ಮ ಚಿತ್ರಗಳನ್ನು ಇತರೆ ಭಾಷೆಗಳಿಗೆ ಡಬ್ ಮಾಡಲು ನಿರ್ಧರಿಸಿದ್ದಾರೆ. ಇದಕ್ಕೆ ಮೊದಲ ಸೇರ್ಪಡೆ ಎಂಬಂತೆ ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ 7 ಭಾಷೆಗಳಲ್ಲಿ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ.
ಅಭಿನಯ ಚಕ್ರವರ್ತಿ ಸುದೀಪ್ ನಟಿಸುತ್ತಿರುವ ಪೈಲ್ವಾನ್ ಚಿತ್ರ ಮತ್ತೊಂದು ದಾಖಲೆ ಬರೆಯೋಕೆ ಸಜ್ಜಾಗುತ್ತಿದ್ದು, ಈಗಾಗಲೆ ಪೈಲ್ವಾನ್​​​ ಚಿತ್ರದ ಚಿತ್ರೀಕರಣ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರದಿಂದ ಸಾಗಿದೆ. ಆದರೆ, ಈಗ ಸಿಕ್ಕಿರುವ ಹೊಸ ಸುದ್ದಿಯ ಅನ್ವಯ ಪೈಲ್ವಾನ್ ಬರೊಬ್ಬರಿ 7 ಭಾಷೆಗಳಲ್ಲಿ ರಿಲೀಸ್ ಆಗಲಿದೆಯಂತೆ.
ಸ್ಯಾಂಡಲ್ವುಡ್ ನ ಕೆಜಿಎಫ್​ ಚಿತ್ರಕ್ಕೆ ಇತರೆ ಚಿತ್ರರಂಗಗಳಲ್ಲೂ ಸಿಕ್ಕಾಪಟ್ಟೆ ಬೆಂಬಲ, ಬೇಡಿಕೆ ಸಿಕ್ಕಿದ್ದೇ, ಪೈಲ್ವಾನ್ ಚಿತ್ರತಂಡ ಈ ನಿರ್ಧಾರಕ್ಕೆ ಬರಲು ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೆ, 7 ಭಾಷೆಗಳಲ್ಲಿ ಚಿತ್ರ ರಿಲೀಸ್ ಮಾಡೋಕೆ ಪೈಲ್ವಾನ್ ಟೀಮ್ ರೆಡಿಯಾಗ್ತಿದ್ದಂತೆ, ಆಗಲೇ ಡಬ್ಬಿಂಗ್ ಹಕ್ಕು ಖರೀದಿಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ ಎನ್ನಲಾಗಿದೆ.  ಈ ಬಗ್ಗೆ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com