ಸ್ಯಾಂಡಲ್'ವುಡ್'ನ ಮತ್ತೊಂದು ಜೋಡಿ ಹಸೆಮಣೆಗೆ: ಡಿಸೆಂಬರ್ 11-12ಕ್ಕೆ ದಿಗ್ಗಿ-ಆ್ಯಂಡಿ ಮದುವೆ ಫಿಕ್ಸ್

ಸ್ಯಾಂಡಲ್'ವುಡ್ ನಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರಲು ಸಿದ್ಧತೆ ನಡೆಸುತ್ತಿದ್ದು, ಚಂದನವನದ ಮೋಸ್ಟ್ ಪಾಪ್ಯುಲರ್ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೈ ಅವರ ಮದುವೆ ಡಿಸೆಂಬರ್ 11-12ಕ್ಕೆ ನಿಗದಿಯಾಗಿದೆ...
ದಿಗಂತ್ ಹಾಗೂ ಐಂದ್ರಿತಾ ರೈ
ದಿಗಂತ್ ಹಾಗೂ ಐಂದ್ರಿತಾ ರೈ
ಬೆಂಗಳೂರು: ಸ್ಯಾಂಡಲ್'ವುಡ್ ನಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರಲು ಸಿದ್ಧತೆ ನಡೆಸುತ್ತಿದ್ದು, ಚಂದನವನದ ಮೋಸ್ಟ್ ಪಾಪ್ಯುಲರ್ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೈ ಅವರ ಮದುವೆ ಡಿಸೆಂಬರ್ 11-12ಕ್ಕೆ ನಿಗದಿಯಾಗಿದೆ. 
ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಈ ಪ್ರಣಯದ ಜೋಡಿ ತಮ್ಮ ಪ್ರೀತಿ ಕುರಿತು ಹೇಳಿಕೊಂಡಿದ್ದು ಮಾತ್ರ ಕಡಿಮೆ. ಪ್ರಸ್ತುತ ಈ ಜೋಡಿ ಇದೇ ಡಿಸೆಂಬರ್ 11 ಮತ್ತು 12ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸರಳವಾಗಿ ವಿವಾಹವಾಗಲು ದಿಗ್ಗಿ-ಆ್ಯಂಡಿ ನಿರ್ಧರಿಸಿದ್ದು, ವಿವಾಹದ ಬಳಿಕ ಡಿ.15ಕ್ಕೆ ಸ್ನೇಹಿತರಿಗೆ ಪಾರ್ಟಿ ಕೊಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. 
ಮನಸಾರಿ ಚಿತ್ರದಲ್ಲಿ ಒಟ್ಟಿಗೆ ನಟಿಸುವ ಮೂಲಕ ದಿಗಂತ್ ಹಾಗೂ ಐಂದ್ರಿತಾ ರೈ ಪರಿಚಯವಾಗಿದ್ದು, ನಂತರ 2012ರ ಪಾರಿಜಾತ ಚಿತ್ರದಲ್ಲೂ ಈ ಜೋಡಿಯ ರೊಮ್ಯಾನ್ಸ್ ತೆರೆ ಮೇಲೆ ಮುಂದುವರೆದಿತ್ತು. ಆ ಬಳಿಕ ಹೆಚ್ಚು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳದಿದ್ದರೂ, ಈ ಜೋಡಿಯ ತೆರೆ ಹಿಂದಿನ ಕೆಮೆಸ್ಟ್ರಿ ಮಾತ್ರ ಮುಂದುವರೆದಿತ್ತು. 
ಬಳಿಕ ಕಾಲ ಕಳೆದಂತೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳತೊಡಗಿದ್ದರು. ದಿಗಂತ್ ಸಿನಿಮಾ ಪ್ರಚಾರದ ವೇಳೆ ಐಂದ್ರಿತಾ ಹಾಗೂ ಐಂದ್ರಿತಾ ಸಿನಿಮಾ ಪ್ರಚಾರದ ವೇಳೆ ದಿಗಂತ್ ಹೀಗೆ ಒಬ್ಬರಿಗೊಬ್ಬರು ಬೆಂಬಲಿಸ ತೊಡಗಿದ್ದರು. ಬಳಿಕ ಗಾಂಧಿನಗರದಲ್ಲಿ ದಿಗ್ಗಿ ಆ್ಯಂಡಿ ಪ್ರೇಮಕಥೆ ಕುರಿತು ಗುಸುಗುಸು ಶುರುವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com