ಗೋಲ್ಡನ್ ಸ್ಟಾರ್ ಗಣೇಶ್‌ರನ್ನು ಪ್ರಶಾಂತ್ ರಾಜ್ ರಾಬಿನ್‌ಹುಡ್‌ಗೆ ಹೋಲಿಸಿದ್ದೇಕೆ?

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಚಿತ್ರದ ಮೋಷನ್ ಪೋಸ್ಟರ್ ಅನ್ನು ನಿರ್ದೇಶಕ ಪ್ರಶಾಂತ್ ರಾಜ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದು ಗಣೇಶ್ ಕಲರ್ ಫುಲ್ ಡ್ರಸ್ ನಲ್ಲಿ ಕಂಗೊಳಿಸಿದ್ದರು...
ಪ್ರಿಯಾ ಆನಂದ್-ಗಣೇಶ್
ಪ್ರಿಯಾ ಆನಂದ್-ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಚಿತ್ರದ ಮೋಷನ್ ಪೋಸ್ಟರ್ ಅನ್ನು ನಿರ್ದೇಶಕ ಪ್ರಶಾಂತ್ ರಾಜ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದು ಗಣೇಶ್ ಕಲರ್ ಫುಲ್ ಡ್ರಸ್ ನಲ್ಲಿ ಕಂಗೊಳಿಸಿದ್ದರು. 
ಇದೀಗ ತಮ್ಮ ಚಿತ್ರದ ಬಗ್ಗೆ ಮಾತನಾಡಿರುವ ಪ್ರಶಾಂತ್ ರಾಜ್ ನನ್ನ ಚಿತ್ರದಲ್ಲಿ ಗಣೇಶ್ ರಾಬಿನ್‌ಹುಡ್‌ ಎಂದು ಹೇಳಿದ್ದಾರೆ. ಇನ್ನು ಚಿತ್ರವನ್ನು ನೋಡಿದರೆ ಗಣೇಶ್ ರಾಬಿನ್‌ಹುಡ್‌ ಆಗಿದ್ದೇಕೆ ಎಂದು ತಿಳಿಯುತ್ತದೆ ಎಂದರು. 
ಆರೆಂಜ್ ಮೋಷನ್ ಪೋಸ್ಟರ್ ಭರ್ಜರಿ ಯಶಸ್ಸಿನ ನಂತರ ಟ್ವೀಟ್ ಮಾಡಿರುವ ನಿರ್ದೇಶಕರು ಚಿತ್ರದ ಮೋಷನ್ ಪೋಸ್ಟರ್ ನೋಡಿದ ಎಲ್ಲಾ ಸಿನಿ ರಸಿಕರಿಗೆ ಧನ್ಯವಾದ ಹೇಳಿದ್ದಾರೆ. ಮೋಷನ್ ಪೋಸ್ಟರ್ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆ ಆಗಿರುವುದಕ್ಕೆ ಧನ್ಯವಾದಗಳು ತಿಳಿಸಿದ್ದಾರೆ. 
ಚಿತ್ರದಲ್ಲಿ ಗಣೇಶ್ ಗೆ ಜೋಡಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ. ಇದೇ ತಿಂಗಳ ಮಧ್ಯಭಾಗದಲ್ಲಿ ಬೃಹತ್ ವೇದಿಕೆ ಮೇಲೆ ಆಡಿಯೋ ಲಾಂಚ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಚಿತ್ರಕ್ಕೆ ಎಸ್ ತಮನ್ ಸಂಗೀತ ಸಂಯೋಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com