ಅಯೋಗ್ಯ-2 ಗೆ ನಿರ್ದೇಶಕ ಮಹೇಶ್ ಕುಮಾರ್ ಸಿದ್ಧತೆ

: ಅಯೋಗ್ಯ ಚಿತ್ರ 50ನೇ ದಿನ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ನಿರ್ದೇಶಕ ಮಹೇಶ್ ಕುಮಾರ್ ಅಯೋಗ್ಯ -2 ನಿರ್ದೇಶಿಸಲು ಮುಂದಾಗಿದ್ದಾರೆ, ...
ಅಯೋಗ್ಯ ಚಿತ್ರತಂಡ
ಅಯೋಗ್ಯ ಚಿತ್ರತಂಡ
ಬೆಂಗಳೂರು: ಅಯೋಗ್ಯ ಚಿತ್ರ 50ನೇ ದಿನ  ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ನಿರ್ದೇಶಕ ಮಹೇಶ್ ಕುಮಾರ್ ಅಯೋಗ್ಯ -2 ನಿರ್ದೇಶಿಸಲು ಮುಂದಾಗಿದ್ದಾರೆ,  ಹಾಗಾಗಿ ಅಯೋಗ್ಯ ಸಿಕ್ವೆಲ್ ಘೋಷಿಸಿದ್ದಾರೆ, ಇದಕ್ಕಾಗಿ ಸ್ಕ್ರಿಪ್ಟ್ ಕೂಡ ತಯಾರಾಗಿದೆ, ಅಯೋಗ್ಯ-2 ನಲ್ಲಿ ಕೂಡ ಅದೇ ತಂಡ ಮುಂದುವರಿಯಲಿದೆ.
ಮಹೇಶ್ ಈಗಾಗೇಲೇ ಶ್ರೀಮುರುಳಿ ಅಭಿನಯದ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ,  ಉಮಾಪತಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ, ಹೀಗಾಗಿ ಶ್ರೀಮುರುಳಿ ಸಿನಿಮಾ ಮುಗಿದ ನಂತರ  ಅಯೋಗ್ಯ -2 ಕೈಗೆತ್ತಿಕೊಳ್ಳಲಿದ್ದಾರೆ, 
ಮೊದಲ ಭಾಗದಲ್ಲಿ ಸತೀಶ್ ನಿನಾಸಂ,  ಮತ್ತು ರಚಿತಾ ರಾಮ್ ಅಭಿನಯಿಸಿದ್ದರು, ಸಿನಿಮಾ 100 ದಿನ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ,  ಹೀಗಾಗಿ ನಿರ್ಮಾಪಕರು 100ನೇ ದಿನದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಂಡ್ಯದಲ್ಲಿ ಆಯೋಜಿಸಲು ನಿರ್ಧರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com