ಕೆಜಿಎಫ್ ಚಿತ್ರ ಪಂಚ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ವಿತರಣಾ ಹಕ್ಕನ್ನು ಅನಿಲ್ ತಡಾನಿ, ರಿತೇಶ್ ಸಿದ್ವಾನಿ ಹಾಗೂ ಫರ್ಹಾನ್ ಅಕ್ತರ್ ತೆಗೆದುಕೊಂಡಿದ್ದು ದೇಶಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ. ಸದ್ಯ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಡಬ್ಬಿಂಗ್ ಮುಗಿದಿದ್ದು ಇನ್ನು ಹಿಂದಿ ಡಬ್ಬಿಂಗ್ ಬಾಕಿ ಇರುವುದರಿಂದ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ.