ಸರ್ಕಾರಿ ಶಾಲೆ ದತ್ತು ಪಡೆದ ಪ್ರಣೀತಾ, ಇತರೆ ಸೆಲಬ್ರಿಟಿಗಳಿಗೆ ಮಾದರಿಯಾದ ನಟಿ!

ಕನ್ನಡ ನಟಿ ಪ್ರಣೀತಾ ಸುಬಾಷ್ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ.
ಪ್ರಣೀತಾ ಸುಬಾಷ್
ಪ್ರಣೀತಾ ಸುಬಾಷ್
ಬೆಂಗಳೂರು: ಕನ್ನಡ ನಟಿ ಪ್ರಣೀತಾ ಸುಬಾಷ್ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ.
ಹಾಸನ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಪ್ರಣೀತಾ ಅದರ ಮೂಲಸೌಕರ್ಯ ಅಭಿವೃದ್ದಿಗಾಗಿ ವೈಯುಕ್ತಿಕವಾಗಿ ಐದು ಲಕ್ಷ ರು. ನೀಡಿದ್ದಾರೆ.
ಇತ್ತೀಚೆಗೆ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಅಲ್ಲಿನ ಅವ್ಯವಸ್ಥೆಗಳನ್ನು ನೋಡಿ ಬಹಳ ನೋವಾಗಿತ್ತು. ಹೀಗಾಗಿ ಶಾಲೆಯೊಂದನ್ನು ದತ್ತು ಸ್ವೀಕರಿಸುವ ನಿರ್ಧಾರಕ್ಕೆ ಬಂದಿದ್ದಾಗಿ ನಟಿ ಹೇಳಿದ್ದಾರೆ, ಅಲ್ಲದೆ ನಟಿ ಈ ಹಿಂದೆ "ಟೀಚ್ ಫಾರ್ ಚೇಂಜ್" ಆಂದೋಲನದಲ್ಲಿ ಭಾಗವಹಿಸಿದ್ದು ಆವೇಳೆ ಅನೇಕ ಸರ್ಕಾರಿ ಶಾಲೆಗಳಿಗೆ ಭೇಟಿ ಕೊಟ್ಟಿದ್ದರು.ಈಗ ಸರ್ಕಾರಿ ಶಾಲೆ ಉಳಿಸಿ ಆದೋಲನ ಸಮಿತಿಯ ಕೆಲಸಕ್ಕೆ ನಟಿ ಕೈಜೋಡಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ ಅಧ್ಯಕ್ಷ ಅನಿಲ್ ಶೆಟ್ಟಿ ಮಾತನಾಡಿ ಮೂರು ತಿಂಗಳಿನಿಂದ ಆಂದೋಲನ ಪ್ರಾರಂಭವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿತು ಉನ್ನತ ಸ್ಥಾನ ಹೊಂದಿದ ವ್ಯಕ್ತಿಗಳಿಂದಲೇ ಆಯಾ ಶಾಲೆಗಳ ಅಭಿವೃದ್ದಿಗಾಗಿ ಯೋಜನೆ ತಯಾರಾಗುತ್ತಿದೆ.ಸಮಿತಿ ಸದಸ್ಯರು ರಾಜ್ಯ ಪ್ರವಾಸ ನಡೆಸಿ ಸರ್ಕಾರಿ ಶಾಲೆಗಳ ದುರವಸ್ಥೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದರು.
ಇದೀಗ ಪ್ರಣೀತಾ ಸರ್ಕಾರಿ ಶಾಲೆ ದತ್ತು ಸ್ವೀಕಾರ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ. ಇನ್ನಿಬ್ಬರು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಸಹ ಶಾಲೆ ದತ್ತು ಪಡೆಯಲು ಮುಂದಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಮೂಲಸೌಲಭ್ಯವಿಲ್ಲದ ಮೂರು ಸರ್ಕಾರಿ ಶಾಲೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಒಂದರ ಅಭಿವೃದ್ದಿಗೆ ಪ್ರಣೀತಾ ನೀಡಿದ ಹಣ ಬಳಕೆಯಾಗಲಿದೆ ಂದು ಅನಿಲ್ ಶೆಟ್ಟಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com