ನನ್ನ ಸ್ವಂತ ಕುಟುಂಬದೊಂದಿಗೆ ಮರಳಿದ್ದೇನೆ ಎನ್ನುವ ಭಾವನೆ: ಅಸ್ಮಿತಾ ಸೂದ್

2013ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ವಿಕ್ಟರ್ ಚಿತ್ರದಲ್ಲಿ ನಟಿಸಿದ್ದ ಅಸ್ಮಿತಾ ಸೂದ್ ಇದೀಗ ವಿಕ್ಟರಿ ಚಿತ್ರದ ಸೀಕ್ವೆಲ್ ನಲ್ಲಿ ಅಭಿನಯಿಸುತ್ತಿದ್ದು ನನ್ನ ಸ್ವಂತ ಕುಟುಂಬದೊಂದಿಗೆ...
ಅಸ್ಮಿತಾ ಸೂದ್
ಅಸ್ಮಿತಾ ಸೂದ್
Updated on: 
2013ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ವಿಕ್ಟರ್ ಚಿತ್ರದಲ್ಲಿ ನಟಿಸಿದ್ದ ಅಸ್ಮಿತಾ ಸೂದ್ ಇದೀಗ ವಿಕ್ಟರಿ ಚಿತ್ರದ ಸೀಕ್ವೆಲ್ ನಲ್ಲಿ ಅಭಿನಯಿಸುತ್ತಿದ್ದು ನನ್ನ ಸ್ವಂತ ಕುಟುಂಬದೊಂದಿಗೆ ನಾನು ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದೇನೆ ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ. 
ಶರಣ್ ಜೊತೆ ವಿಕ್ಟರಿ ಚಿತ್ರದ ಸೀಕ್ವೆಲ್ ನಲ್ಲಿ ನಟಿಸುತ್ತಿರುವ ಅಸ್ಮಿತಾ ಸೂದ್ ಅವರು ವಿಕ್ಟರಿ ಚಿತ್ರದ ಸೀಕ್ವೆಲ್ ಬರುತ್ತದೆ ಎಂದು ನಾನು ಊಹಿಸಿರಲಿಲ್ಲ. ಚಿತ್ರ ತಂಡ ಸೀಕ್ವೆಲ್ ಬರುತ್ತಿರುವುದಾಗಿ ಹೇಳಿದಾಗ ನನಗೆ ಆಶ್ಚರ್ಯವಾಯಿತು ಎಂದರು. ಮೊದಲ ಭಾಗದಲ್ಲಿ ನಾನು ಅಭಿಯಿಸಿದ್ದು ಸೀಕ್ವೆಲ್ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ನಾನು ಒಪ್ಪಿಕೊಂಡೆ ಎಂದರು. 
ಅಸ್ಮಿತಾ ಸೂದ್ ವಿಕ್ಟರಿ ಚಿತ್ರದ ನಂತರ ಶರಣ್ ಜೊತೆ ಅಧ್ಯಕ್ಷ ಚಿತ್ರದಲ್ಲಿ ಅಭಿನಯಿಸಿದ್ದರು. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೆ ಕನ್ನಡದ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕೆಲ ಹಿಂದಿ ಧಾರಾವಾಹಿಗಳ ಕಮಿಟ್ ಮೆಂಟ್ ನಿಂದ ನಾನು ಮುಂಬೈನಲ್ಲೇ ಉಳಿಯಬೇಕಾಯಿತು ಎಂದರು. 
ವಿಕ್ಟರಿ ಚಿತ್ರದಲ್ಲಿ ಅಸ್ಮಿತಾ ಸೂದ್ ಶರಣ್ ರ ಹೆಂಡತಿಯ ಪಾತ್ರದಲ್ಲಿ ನಟಿಸಿದ್ದು ಸೀಕ್ವೆಲ್ ನಲ್ಲೂ ಅದೇ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೀಕ್ವೆಲ್ ಚಿತ್ರದಲ್ಲಿ ಹಲವು ಟ್ವೀಟ್ಸ್ ಗಳಿಂದ ಕೂಡಿದೆ ಎಂದು ಅಸ್ಮಿತಾ ಹೇಳಿದ್ದಾರೆ. 
ವಿಕ್ಟರ್ 2 ಚಿತ್ರವನ್ನು ಹರಿ ಸಂತೋಷ್ ನಿರ್ದೇಶನ ಮಾಡುತ್ತಿದ್ದು ಚಿತ್ರಕ್ಕೆ ತರುಣ್ ಶಿವಪ್ಪ ಬಂಡವಾಳ ಹೂಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com