ದರ್ಶನ್ 53ನೇ ಚಿತ್ರ 'ರಾಬರ್ಟ್' ಫರ್ಸ್ಟ್ ಲುಕ್ ದೀಪಾವಳಿಗೆ ರಿಲೀಸ್!

: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 53ನೇ ಚಿತ್ರದ ಫರ್ಸ್ಟ್ ಲುಕ್ ರಿಲೀಸ್ ಆಗಲಿದೆ. ತರುಣ್ ಸುಧೀರ್ ನಿರ್ದೇಶನದ ಚಿತ್ರಕ್ಕೆ ಉಮಾಪತಿ ...
ದರ್ಶನ್
ದರ್ಶನ್
Updated on: 
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 53ನೇ ಚಿತ್ರದ ಫರ್ಸ್ಟ್ ಲುಕ್ ರಿಲೀಸ್ ಆಗಲಿದೆ. ತರುಣ್ ಸುಧೀರ್ ನಿರ್ದೇಶನದ ಚಿತ್ರಕ್ಕೆ ಉಮಾಪತಿ ನಿರ್ಮಾಪಕರಾಗಿದ್ದಾರೆ. ನವೆಂಬರ್ 6 ದೀಪಾವಳಿಯಂದು ರಿಲೀಸ್ ಆಗಲಿದೆ, ಈ ಸಿನಿಮಾಗೆ ರಾಬರ್ಟ್ ಎಂದು ಟೈಟಲ್ ಇಡುವ ಸಾಧ್ಯತೆಯಿದೆ. ಡಿಸೆಂಬರ್ ನಲ್ಲಿ ಅಧಿಕೃತವಾಗಿ ಘೋಷಣೆಯಾಗಲಿದೆ.
ಈ ಹಿಂದೆ ತರುಣ್ ಸುಧೀರ್ ಚೌಕ ಚಿತ್ರ ನಿರ್ದೇಶಿಸಿದ್ದರು, ಅದರಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ರಾಬರ್ಟ್ ಪಾತ್ರದಲ್ಲಿ ದರ್ಶನ್ ನಟಿಸಿದ್ದಾರೆ, ಹೀಗಾಗಿ ಸಿನಿಮಾ ಟೈಟಲ್ ಕೂಡ ರಾಬರ್ಟ್ ಎಂದೇ ಇರಲಿದೆ, ದರ್ಶನ್ ಅವರ ಕುರುಕ್ಷೇತ್ರ, ಯಜಮಾನ ಮತ್ತು ಒಡೆಯ ಸಿನಿಮಾಗಳ ಚಿತ್ರೀಕರಣ ಬಹುತೇಕ ಮುಗಿಯುತ್ತಿದೆ,
ಮುಂದಿನ ವರ್ಷದ ಆರಂಭದಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ, ಅದಾದ ನಂತರ ಐತಿಹಾಸಿಕ ಮದಕರಿ ನಾಯಕ ಸಿನಿಮಾ ಆರಂಭವಾಗಲಿದೆ. ಸದ್ಯ ತರುಣ್ ಪ್ರಿ ಪ್ರೊಡಕ್ಷನ್ ಕೆಲಸ ಮಾಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com