

ನಾಳೆ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬ. ಅವರ ನಟನೆಯ ಮುಂಬರುವ ಚಿತ್ರ 'ಐ ಲವ್ ಯೂ' ಚಿತ್ರತಂಡ ಉಪೇಂದ್ರ ಅವರಿಗೆ ಆಶ್ಚರ್ಯಕರ ಉಡುಗೊರೆ ಕೊಡಲು ಯೋಜನೆ ಮಾಡಿದೆ. ಚಿತ್ರತಂಡ 3ಡಿ ಮೋಷನ್ ಪೋಸ್ಟರ್ ನ್ನು ತಯಾರು ಮಾಡಿದೆ. ಅದೊಂದು ಕ್ರಿಯಾಶೀಲ ಮತ್ತು ಹೊಸತನ ಪ್ರಯತ್ನ ಎನ್ನುತ್ತಾರೆ ಚಿತ್ರದ ನಿರ್ದೇಶಕ ಆರ್ ಚಂದ್ರು.
ನಾಳೆಯೇ ಉಪೇಂದ್ರ ಅವರು ತಮ್ಮ ರಾಜಕೀಯ ಪಕ್ಷ ಉತ್ತಮ ಪ್ರಜಾಕೀಯ ಪಾರ್ಟಿಯನ್ನು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಐ ಲವ್ ಯೂ ಚಿತ್ರದ ಶೂಟಿಂಗ್ ಜೂನ್ ನಲ್ಲಿ ಆರಂಭವಾಗಿತ್ತು. ಸಂಭಾಷಣೆ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡು ಮತ್ತು ಫೈಟಿಂಗ್ ದೃಶ್ಯ ಬಾಕಿ ಉಳಿದಿದೆ. ಲವ್ ಗುರುವಿನ ಪಾತ್ರವನ್ನು ಇಲ್ಲಿ ಉಪೇಂದ್ರ ಮಾಡಿದ್ದು, ಉಪೇಂದ್ರ ಅವರು ತಮ್ಮ ಕಾಲೇಜು ದಿನಗಳ ನೆನಪು ಚಿತ್ರದ ಮೂಲಕ ಬಂದಿದೆಯಂತೆ.
ನಾಯಕಿ ಪಾತ್ರದಲ್ಲಿ ರಚಿತಾ ರಾಮ್ ಮತ್ತು ಸೋನು ಗೌಡ, ತ್ರಿವೇಣಿ ಮುಖ್ಯ ಪಾತ್ರ ವಹಿಸಿದ್ದಾರೆ. ಕಿರಣ್ ತೋಟಂಬೈಲು ಅವರ ಸಂಗೀತ ಮತ್ತು ನವೀನ್ ಕುಮಾರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.