ಕೊನೆಗೂ ಬೆಂಗಳೂರಿನಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು!

ಖ್ಯಾತ ಬಾಲಿವುಡ್ ನಟಿ ಮತ್ತು ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಬೆಂಗಳೂರಿನಲ್ಲಿ ಪ್ರದರ್ಶನ ನೀಡಲಿದ್ದು, ವಿಶೇಷ ಕಾರ್ಯಕ್ರಮವೊಂದರಲ್ಲಿ ಸನ್ನಿ ಬೆಂಗಳೂರಿನಲ್ಲಿ ಹೆಜ್ಜೆ ಹಾಕಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಖ್ಯಾತ ಬಾಲಿವುಡ್ ನಟಿ ಮತ್ತು ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಬೆಂಗಳೂರಿನಲ್ಲಿ ಪ್ರದರ್ಶನ ನೀಡಲಿದ್ದು, ವಿಶೇಷ ಕಾರ್ಯಕ್ರಮವೊಂದರಲ್ಲಿ ಸನ್ನಿ ಬೆಂಗಳೂರಿನಲ್ಲಿ ಹೆಜ್ಜೆ ಹಾಕಲಿದ್ದಾರೆ.
ದಿ ಟೈಮ್ಸ್ ಕ್ರಿಯೇಷನ್ ಆಯೋಜಿಸುತ್ತಿರುವ ಫ್ಯೂಷನ್ ನೈಟ್ ಕಾರ್ಯಕ್ರಮಕ್ಕಾಗಿ ಸನ್ನಿಲಿಯೋನ್​​ ಬೆಂಗಳೂರಿಗೆ ಆಗಮಿಸುತ್ತಿದ್ದು. ಇದೇ ನವೆಂಬರ್​​ 3 ರಂದು ಸನ್ನಿ ಲಿಯೋನ್ ಕಾರ್ಯಕ್ರಮ ನೀಡಲಿದ್ದಾರೆ.
ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತು ಅವರ ತಂಡ ಕೂಡ ಪಾಲ್ಗೊಳ್ಳುತ್ತಿದ್ದು, ಕಾರ್ಯಕ್ರಮಕ್ಕಾಗಿ ಈಗಾಗಲೇ ಭರದ ಸಿದ್ಧತೆ ಆರಂಭವಾಗಿದೆ. ಕಾರ್ಯಕ್ರಮದಲ್ಲಿ ಸನ್ನಿ ಒಟ್ಟು 3 ಹಾಡುಗಳಿಗೆ ಸೊಂಟ ಬಳುಕಿಸಲಿದ್ದಾರೆ ಎಂದು ಹೇಳಲಾಗಿದೆ.
ಕಾರ್ಯಕ್ರಮದ ಕುರಿತು ಮಾತನಾಡಿದ ಕಾರ್ಯಕ್ರಮದ ಆಯೋಜಕ ಹಾಗೂ ದಿ ಟೈಮ್ಸ್ ಕ್ರಿಯೇಷನ್ ನ ಎಂಡಿ ಎಂಎಸ್ ಹರೀಶ್ ಅವರು, ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದು ಖುಷಿಯ ವಿಚಾರ. ಅವರೊಂದಿಗೆ ರಘು ದೀಕ್ಷಿತ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಜೋಷ್ ಇಮ್ಮಡಿಗೊಳಿಸಿದೆ. ಸನ್ನಿಗಿಂತಲೂ ವೇದಿಕೆಯಲ್ಲಿ ರಘು ದೀಕ್ಷಿತ್ ಹೆಚ್ಚು ಹೊತ್ತು ಪ್ರದರ್ಶನ ನೀಡಲಿದ್ದಾರೆ. ಸನ್ನಿ ಒಟ್ಟು 3 ಕನ್ನಡ ಹಾಡಿಗೆ ನೃತ್ಯ ಮಾಡಲಿದ್ದಾರೆ ಎಂದು ಹೇಳಿದರು.
ಇನ್ನು ಈ ಹಿಂದೆ ಕಳೆದ ವರ್ಷವೇ ಸನ್ನಿ ಲಿಯೋನ್ ಬೆಂಗಳೂರಿನಲ್ಲಿ ನೃತ್ಯ ಪ್ರದರ್ಶನ ನೀಡಬೇಕಿತ್ತು. ಹೊಸ ವರ್ಷ ಸಂಭ್ರಮಾಚರಣೆ ವೇಳೆ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿಕೊಳ್ಳಲಾಗಿತ್ತು. ಆದರೆ ಭದ್ರತಾ ದೃಷ್ಟಿಯಿಂದ ಬೆಂಗಳೂರು ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರು. ಅಲ್ಲದೆ ಕೆಲ ಹಿಂದೂಪರ ಸಂಘಟನೆಗಳು ಸನ್ನಿ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com