ಸಿನಿಮಾ ಸುದ್ದಿ

ಬೆಂಗಳೂರು: ನಟ ವಿನೋದ್ ರಾಜ್ ಕಾರಿನಲ್ಲಿದ್ದ 1 ಲಕ್ಷ ರೂ ಕಳ್ಳತನ!

ಕಾರಿನ ಟೈರ್ ಪಂಕ್ಚರ್ ಆಗಿರುವುದಾಗಿ ಹೇಳಿ ಕನ್ನಡ ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರ ಗಮನ ಬೇರೆಡೆ ಸೆಳೆದ ಕಳ್ಳರು ಕಾರಿನಲ್ಲಿದ್ದ 1 ಲಕ್ಷ ರೂ. ಕದ್ದೊಯ್ದ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.

ಬೆಂಗಳೂರು: ನಟ ವಿನೋದ್ ರಾಜ್ ಕಾರಿನಲ್ಲಿದ್ದ 1 ಲಕ್ಷ ರೂ ಕಳ್ಳತನ!
ವಿನೋದ್ ರಾಜ್
Published On :
ಬೆಂಗಳೂರು: ಕಾರಿನ ಟೈರ್ ಪಂಕ್ಚರ್ ಆಗಿರುವುದಾಗಿ ಹೇಳಿ ಕನ್ನಡ ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರ ಗಮನ ಬೇರೆಡೆ ಸೆಳೆದ ಕಳ್ಳರು ಕಾರಿನಲ್ಲಿದ್ದ 1 ಲಕ್ಷ ರೂ. ಕದ್ದೊಯ್ದ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.
ಶುಕ್ರವಾರ ತಮ್ಮ ತೋಟದ ಕೆಲಸಗಾರರಿಗೆ ವೇತನ ಪಾವತಿಸುವ ಸಲುವಾಗಿ ವಿನೋದ್ ರಾಜ್ ಅವರು ಬ್ಯಾಂಕ್ ನಿಂದ ಒಂದು ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿಕೊಂಡು ತಂದಿದ್ದರು. ನೆಲಮಂಗಲ ಪಟ್ಟಣದ, ಇಂಡಸ್‍ಲ್ಯಾಂಡ್ ಬ್ಯಾಂಕ್ ನಿಂದ ಹಣ ತಂದಿದ್ದ ನಟ ಕಾರನ್ನು ಸಿಎನ್ ಆರ್ ಬಟ್ಟೆ ಮಳಿಗೆ ಸಮೀಪ ನಿಲ್ಲಿಸಿದ್ದಾಗ ಅಲ್ಲಿಗೆ ಆಗಮಿಸಿದ ಇಬ್ಬರು ಅಪರಿಚಿತರು "ಏನ್ ಸರ್, ಚೆನ್ನಾಗಿದ್ದೀರಾ?" ಎಂದು ಆತ್ಮೀಯತೆಯಿಂದ ಮಾತನಾಡಿಸಿದ್ದಾರೆ. ಬಳಿಕ ಕಾರಿನ ಟೈರ್ ಪಂಕ್ಚರ್ ಆಗಿರುವುದಾಗಿ ಹೇಳಿ ಅದನ್ನು ರಿಪೇರಿ ಮಾಡಿಕೊಡುತ್ತೇವೆಂದು ಹೇಳಿದ ಕಳ್ಳರು ವಿನೋದ್ ರಾಜ್ ಕಣ್ ತಪ್ಪಿಸಿ ಕಾರಿನಲ್ಲಿದ್ದ ಹಣ ಎಗರಿಸಿ ಪರಾರಿಯಾಗಿದ್ದಾರೆ.
ಈ ಸಂಬಂಧ ನೆಲಮಂಗಲ ಪೋಲೀಸರಿಗೆ ದೂರು ಸಲ್ಲಿಸಿರುವ ನಟ "ಲಕ್ಷ ರು. ಕಳೆದು ಹೋಗಿರುವುದು ನನಗೆ ಬಹಳ ಸಮಸ್ಯೆಯಾಗಿದೆ.ಎಂದು ಮಾದ್ಯಮದವರ ಬಳಿ ನೋವು ತೋಡಿಕೊಂಡಿದ್ದಾರೆ.
ಹಣ ಕಳ್ಳತನದ ಕುರಿತಂತೆ ದೂರು ದಾಖಲಿಸಿಕೊಂಡಿರುವ ಪೋಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.