ಪಡ್ಡೆಹುಲಿಗೆ 'ಪವರ್', ವಿಶೇಷ ಪಾತ್ರದಲ್ಲಿ ಪುನೀತ್!

ಸ್ಯಾಂಡಲ್ವುಡ್ ನ ಖ್ಯಾತ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮಂಜು ಪಾದಾರ್ಪಣೆ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಬಳಿಕ ಇದೀಗ ಪವರ್ ಸಾಥ್ ಸಿಕ್ಕಿದೆ.
ಶ್ರೇಯಸ್ ಮಂಜು-ಪುನೀತ್ ರಾಜಕುಮಾರ್
ಶ್ರೇಯಸ್ ಮಂಜು-ಪುನೀತ್ ರಾಜಕುಮಾರ್
ಸ್ಯಾಂಡಲ್ವುಡ್ ನ ಖ್ಯಾತ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮಂಜು ಪಾದಾರ್ಪಣೆ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಬಳಿಕ ಇದೀಗ ಪವರ್ ಸಾಥ್ ಸಿಕ್ಕಿದೆ. 
ಹೌದು, ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸುತ್ತಿದ್ದಾರೆ. ಇದೀಗ ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು ಚಿತ್ರಕ್ಕೆ ಪವರ್ ಸಾಥ್ ಸಿಕ್ಕಿದೆ. ಚಿತ್ರದ ಕ್ಲೈಮಾಕ್ಸ್ ನಲ್ಲಿ ಪುನೀತ್ ರಾಜಕುಮಾರ್ ಎಂಟ್ರಿ ಕೊಡಲಿದ್ದಾರೆ ಎಂದು ನಿರ್ದೇಶಕ ಗುರು ದೇಶಪಾಂಡೆ ಅವರು ತಿಳಿಸಿದ್ದಾರೆ. 
25 ವರ್ಷಗಳ ಬಳಿಕ ರವಿಚಂದ್ರನ್ ಹಾಗೂ ಸುಧಾರಾಣಿ ಪಡ್ಡೆಹುಲಿ ಚಿತ್ರದಲ್ಲಿ ಒಂದಾಗುತ್ತಿದ್ದಾರೆ. ಮನೆದೇವ್ರು ಬಳಿಕ ಈ ಇದೇ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದಾರೆ. 
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಮುಂದಿನ ವಾರ ಚಿತ್ರ ತೆರೆಗಪ್ಪಳಿಸಲಿದೆ. ಏಪ್ರಿಲ್ 10ರಂದು ಚಿತ್ರದ ಹಾಡಿಯೋ ಬಿಡುಗಡೆಯಾಗುತ್ತಿದ್ದು ಆಡಿಯೋವನ್ನು ಸುದೀಪ್, ಗಣೇಶ್ ಮತ್ತು ಶ್ರೀಮುರಳಿ ಬಿಡುಗಡೆ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com