ಸದ್ದಿಲ್ಲದೆ ತಯಾರಾಗ್ತಿದೆ ಇನ್ಫೋಸಿಸ್ ನಾರಾಯಣ ಮೂರ್ತಿ ಬಯೋ ಪಿಕ್

ಕರುನಾಡಿನಖ್ಯಾತ ಉದ್ಯಮಿ, ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಅವರ ಜೀವನವನ್ನು ಆಧರಿಸಿದ ಚಿತ್ರವೊಂದರ ತಯಾರಿ ಸದ್ದಿಲ್ಲದೆ ನಡೆಯುತ್ತಿದೆ.
ಸದ್ದಿಲ್ಲದೆ ತಯಾರಾಗ್ತಿದೆ ಇನ್ಫೋಸಿಸ್ ನಾರಾಯಣ ಮೂರ್ತಿ ಬಯೋ ಪಿಕ್
ಸದ್ದಿಲ್ಲದೆ ತಯಾರಾಗ್ತಿದೆ ಇನ್ಫೋಸಿಸ್ ನಾರಾಯಣ ಮೂರ್ತಿ ಬಯೋ ಪಿಕ್
Updated on
ಕರುನಾಡಿನ ಖ್ಯಾತ ಉದ್ಯಮಿ, ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಅವರ ಜೀವನವನ್ನು ಆಧರಿಸಿದ ಚಿತ್ರವೊಂದರ ತಯಾರಿ ಸದ್ದಿಲ್ಲದೆ ನಡೆಯುತ್ತಿದೆ.

ಖ್ಯಾತ ಚಿತ್ರ ನಿರ್ಮಾಪಕ ದಂಪತಿಗಳಾದ ಅಶ್ವಿನಿ ಅಯ್ಯರ್ ತಿವಾರಿ ಮತ್ತು ನಿತೇಶ್ ತಿವಾರಿ ನಾರಾಯಣ ಮೂರ್ತಿ ದಂಪತಿಗಳ ಜೀವನಾಧಾರಿತ ಚಿತ್ರಕ್ಕಾಗಿ ಬಂಡವಾಳ ಹೂಡುತ್ತಿದ್ದಾರೆ. ಮಹಾವೀರ್ ಜೈನ್ ಸಹ ಇದಕ್ಕಾಗಿ ಹಣ ಹೂಡಿಕೆ ಮಡಿದ್ದಾರೆ ಎಂದು ತಯಾರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

"ನಿಲ್ ಬಟ್ಟೆ ಸನ್ನಾಟಾ" ಮತ್ತು "ಬರೇಲಿ ಕಿ ಬರ್ಫಿ" ನಂತಹ ಚಲನಚಿತ್ರಗಳನ್ನು ಕೊಟ್ಟ ಅಶ್ವಿನಿ "ಪಂಗಾ" ನಂತರ ಈ ಹೊಸ ಯೋಜನೆಗೆ ಕೈ ಹಚ್ಚಿದ್ದಾರೆ. 

ಕಥೆಯ ಕಲ್ಪನೆ ಮತ್ತು ಪರಿಕಲ್ಪನೆಯು ಲೇಖಕ ಸಂಜಯ್ ತ್ರಿಪಾಠಿ ಅವರದಾಗಿದ್ದು ಚಿತ್ರದಲ್ಲಿ ಮೂರ್ತಿಯವರ ಸ್ಪೂರ್ತಿದಾಯಕ ಜೀವನ ಹಗೂ ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ನಿರೂಪಿಸುತ್ತದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com