ಯೂ ಟ್ಯೂಬ್  ಟಾಪ್ ಟ್ರೆಂಡಿಂಗ್ ನಲ್ಲಿ 'ರೌಡಿ ಬೇಬಿ' ಸಾಂಗ್!

 ಧನುಷ್ ಹಾಗೂ ಸಾಯಿ ಪಲ್ಲವಿ ಅಭಿನಯದ  'ರೌಡಿ ಬೇಬಿ' ಸಾಂಗ್  ಯುಟೂಬ್ ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ. ಈ ಹಾಡು ತಮಿಳು ಚಿತ್ರ "ಮಾರಿ 2' ಟ್ರಾಕ್ ನ ಒಂದು ಭಾಗವಾಗಿದೆ.
ಧನುಷ್, ಸಾಯಿ ಪಲ್ಲವಿ
ಧನುಷ್, ಸಾಯಿ ಪಲ್ಲವಿ
Updated on: 

ನವದೆಹಲಿ:  ಧನುಷ್ ಹಾಗೂ ಸಾಯಿ ಪಲ್ಲವಿ ಅಭಿನಯದ  'ರೌಡಿ ಬೇಬಿ' ಸಾಂಗ್  ಯುಟೂಬ್ ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ. ಇದು  ತಮಿಳು ಚಿತ್ರ "ಮಾರಿ 2' ನ ಸಾಂಗ್ ಆಗಿದೆ.

2019 ವರ್ಷ ಮುಗಿಯಲು ಕೆಲ ದಿನಗಳು ಬಾಕಿ ಇರುವಂತೆ ಯೂ ಟಾಪ್ ಚಾನೆಲ್,  ಟಾಪ್ ವಿಡಿಯೋಗಳನ್ನು ಬಹಿರಂಗಪಡಿಸಿದ್ದು, ರೌಡಿ ಬೇಬಿ ಸಾಂಗ್ ಮೊದಲ ಸ್ಥಾನದಲ್ಲಿದ್ದರೆ, ಧ್ವನಿ ಭಾನುಶಾಲಿ ಮತ್ತು ಡಿ. ನಿಖಿಲ್ ಅವರ 'ವಾಸ್ತೆ' ಎರಡನೇ ಸ್ಥಾನದಲ್ಲಿದೆ. 

ಅಕ್ಷಯ್ ಕುಮಾರ್ ಹಾಗೂ ಪರಿಣಿತಿ ಚೋಪ್ರಾ ಅಭಿನಯದ ಕೇಸರಿ ಸಿನಿಮಾದ ' ಧೀಮಿ, ಧೀಮಿ, "ಪಚ್ಟೌಜ್" ಮತ್ತು "ಓ ಸಾಕಿ ಸಾಕಿ''  ಹಾಡುಗಳು ಕೂಡಾ ಈ ಪಟ್ಟಿಯಲ್ಲಿವೆ.

ಕಳೆದ ಕೆಲ ವರ್ಷಗಳಲ್ಲಿ ಭಾರತೀಯರ ವಿಡಿಯೋಗಳು ಸ್ಪೂರ್ತಿಯುತವಾಗಿವೆ. ಭಾರತದಲ್ಲಿ ಯೂ ಟ್ಯೂಬ್ ಆರಂಭವಾಗಿ 12 ವರ್ಷವಾಗಿದ್ದು, 2019ರಲ್ಲಿ ಒಂದಕ್ಕಿಂತ ಒಂದು ಭಿನ್ನವಾದ ವಿಡಿಯೋಗಳು ಭಾರೀ ವೀಕ್ಷಣೆ ಪಡೆದುಕೊಂಡಿವೆ ಎಂದು ಯು ಟೂಬ್ ಪಾಲುದಾರಿಕೆ ನಿರ್ದೇಶಕ ಸತ್ಯ ರಾಘವನ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com